ಹೆಬ್ಬಾಳಿನಲ್ಲಿರುವ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ದೀಪೋತ್ಸವಕ್ಕೆ ಡಾ. ಶ್ರೀನಿರ್ಮಲಾನಂದ ಮಹಾಸ್ವಾಮೀಜಿ ಚಾಲನೆ ನೀಡಿದರು. ಶ್ರೀಸೋಮೇಶ್ವರನಾಥಸ್ವಾಮೀಜಿ, ಜಿ.ಟಿ. ದೇವೇಗೌಡ, ಡಿ. ಮಾದೇಗೌಡ, ಗುಂಡಪ್ಪಗೌಡ, ಮಂಜೇಗೌಡ, ಬೆಳಗೊಳ ಸುಬ್ರಹ್ಮಣ್ಯ ಇತರರು ಇದ್ದರು.
- ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಶ್ರೀನಿರ್ಮಲಾನಂದ ಸ್ವಾಮೀಜಿ ಅವರಿಂದ ಚಾಲನೆ
- ಮೈಸೂರು ಹೆಬ್ಬಾಳಿನಲ್ಲಿರುವ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಸ್ಥಾನ
ಮೈಸೂರು: ದೀಪೋತ್ಸವವು ನಮ್ಮ ಮನಸ್ಸಿನಲ್ಲಿರುವ ಕತ್ತಲನ್ನು ಹೋಗಲಾಡಿಸುವ ಪರಂಜ್ಯೋತಿಯಾಗಲಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಶ್ರೀನಿರ್ಮಲಾನಂದ ಸ್ವಾಮೀಜಿ ತಿಳಿಸಿದರು.
ಹೆಬ್ಬಾಳಿನಲ್ಲಿರುವ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಕು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರುತ್ತದೆ. ಅದನ್ನು ಪಡೆಯಲು ಹಂಬಲ, ಸಾಧನೆ ಮಾಡಬೇಕು. ಬೆಳಕು ಬೆಳಕಲ್ಲ, ಕತ್ತಲು ಕತ್ತಲಲ್ಲ. ಕತ್ತಲಿಂದ ಬೆಳಕಿನೆಡೆಗೆ ಸಾಗಬೇಕಾದರೆ ಅಜ್ಞಾನಿಯಾಗಿರುವ ಮನುಷ್ಯನಲ್ಲಿರುವ ಮಲದೋಷ, ನಿಕ್ಷೇಪದೋಷ, ಆವರಣದೋಷಗಳನ್ನು ವಿಜ್ಞಾನದೆಡೆಗೆ, ಧ್ಯಾನದೆಡೆಗೆ, ಸನ್ಮಾರ್ಗದೆಡೆಗೆ ಪ್ರತಿಯೊಬ್ಬರು ಸಾಗಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಶಾಖಾ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಕೆ. ಹರೀಶ್‌ಗೌಡ, ವಿಧಾನ ಪರಿಷತ್ತನ ಮಾಜಿ ಸದಸ್ಯ ಡಿ. ಮಾದೇಗೌಡ, ಮಾಜಿ ಸಂಸದ ಪ್ರತಾಪ್‌ಸಿಂಹ, ಐಪಿಎಸ್ ಅಧಿಕಾರಿ ಪ್ರಕಾಶ್‌ಗೌಡ, ಮುಖಂಡರಾದ ಗುಂಡಪ್ಪಗೌಡ, ನಾರಾಯಣ, ಪ್ರಶಾಂತ್‌ಗೌಡ, ಕೆ.ವಿ.ಶ್ರೀಧರ್, ಗಂಗಾಧರ್, ಮಂಜೇಗೌಡ, ಬೆಳಗೊಳ ಸುಬ್ರಹ್ಮಣ್ಯ, ಗೋಪಾಲ್ ಇತರರು ಇದ್ದರು.
ತುಮಕೂರಿನ ವಿನೋದ್ ದೀಕ್ಷಿತ್ ಅವರಿಂದ ಪೂಜಾಕಾರ್ಯಕ್ರಮಗಳು ನೆರವೇರಿದವು. ಭಜನಾ ಕಾರ್ಯಕ್ರಮ ನೃತ್ಯರೂಪಕ, ದೇವರ ಮೆರವಣಿಗೆ ನಡೆದವು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.