ಸಿದ್ಧಾರ್ಥನಗರದ ಟೆರೆಷಿಯನ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ತುಮಕೂರು ವಿಶ್ವವಿದ್ಯಾಲಯದ ಹಿರಿಂು ಪ್ರಾಧ್ಯಾಪಕ ಡಾ.ಪಿ.ಪರಮಶಿವಯ್ಯ ಉದ್ಘಾಟಿಸಿದರು. ಡಾ. ರೋಹಿಣಿ, ಡಾ.ವೀಣಾ ಎಂ.ಡಿ.ಅಲ್ಮೇಡಾ, ವಿವೇಕ್ ಚಾರ್ಲ್ಸ್, ಡಾ.ಪಿ.ಎಂ.ಶಿವಪ್ರಸಾದ್ ಇನ್ನಿತರರಿದ್ದರು. 
ಮೈಸೂರು

ಸಂಶೋಧನೆಯಲ್ಲಿ ದತ್ತಾಂಶ ಅತ್ಯಂತ ಮಹತ್ವ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಎಸ್‌ಪಿಎಸ್‌ಎಸ್ ಬಳಸಿಕೊಂಡು ಅಂಕಿ- ಅಂಶಗಳ ದತ್ತಾಂಶ ವಿಶ್ಲೇಷಣೆ ಕುರಿತಾದ ರಾಷ್ಟ್ರೀಯ ಕಾರ್ಯಾಗಾರ
  • ದತ್ತಾಂಶವು ಸಂಶೋಧನೆಯ ವಿಶ್ವಾಸಾರ್ಹತೆಯನ್ನು ಖಾತ್ರಿ
  • ಸಂಶೋಧನೆಯು ಸಂಶೋಧಕನ ಬೌದ್ಧಿಕತೆ ಮಟ್ಟ ಹಾಗೂ ಚಿಂತನಶೀಲತೆ ವೃದ್ಧಿಸಲು ನೆರವು
ಮೈಸೂರು: ಸಂಶೋಧನೆಯಲ್ಲಿ ದತ್ತಾಂಶವು ಅತ್ಯಂತ ಮಹತ್ವದಾಗಿದ್ದು, ನಿರ್ಣಯ ತೆಗೆದುಕೊಳ್ಳಲು, ಸಿದ್ಧಾಂತ ರೂಪಿಸಲು ಮತ್ತು ಫಲಿತಾಂಶ ವಿಶ್ಲೇಷಿಸಲು ಆಧಾರ ಒದಗಿಸುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಹಿರಿಂು ಪ್ರಾಧ್ಯಾಪಕ ಡಾ.ಪಿ.ಪರಮಶಿವಯ್ಯ ಹೇಳಿದರು.
ಸಿದ್ಧಾರ್ಥನಗರದ ಟೆರೆಷಿಯನ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್‌ಪಿಎಸ್‌ಎಸ್ ಬಳಸಿಕೊಂಡು ಅಂಕಿ- ಅಂಶಗಳ ದತ್ತಾಂಶ ವಿಶ್ಲೇಷಣೆ ಕುರಿತಾದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಉತ್ತಮ ಗುಣಮಟ್ಟದ ದತ್ತಾಂಶವು ಸಂಶೋಧನೆಯ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುತ್ತದೆ. ಪಕ್ಷಪಾತವನ್ನು ಕಡಿಮೆ ಮಾಡುತ್ತದೆ. ಸಂಶೋಧಕರು ತಮ್ಮ ಅಧ್ಯಯನದ ಉದ್ದೇಶಗಳಿಗೆ ಅನುಗುಣವಾಗಿ ದತ್ತಾಂಶ ಸಂಗ್ರಹಿಸಿ ವಿಶ್ಲೇಷಿಸುತ್ತಾರೆ. ಇದು ಹೊಸ ಜ್ಞಾನವನ್ನು ಹೊರತರಲು ಸಹಾಯ ಮಾಡುತ್ತದೆ ಎಂದರು.
ಕೇರಳ ಕೇಂದ್ರ ವಿಶ್ವವಿದ್ಯಾಲಯದ ಪ್ರೊ.ಟಿ.ಎ.ಬಿನೋಯ್ ಮಾತನಾಡಿ, ಸಂಶೋಧನೆಯು ಸಂಶೋಧಕನ ಬೌದ್ಧಿಕತೆ ಮಟ್ಟ ಹಾಗೂ ಚಿಂತನಶೀಲತೆ ವೃದ್ಧಿಸಲು ನೆರವಾಗುತ್ತದೆ. ಜತೆಗೆ, ವ್ಯಕ್ತಿಗಳ ಬದಲಾವಣೆ, ಸಿದ್ಧಾಂತಗಳನ್ನು ಮೌಲ್ಯೀಕರಿಸಲು ಮತ್ತು ಹೊಸ ಒಳನೋಟ ಅಭಿವೃದ್ಧಿ ಪಡಿಸಲು ಅನುಕೂಲಕರವಾಗುತ್ತದೆ ಎಂದರು.
ಪ್ರಾಂಶುಪಾಲೆ ಡಾ. ರೋಹಿಣಿ, ಸಂಶೋಧನಾ ನಿರ್ದೇಶಕಿ ಡಾ.ವೀಣಾ ಎಂ.ಡಿ.ಅಲ್ಮೇಡಾ, ಐಕ್ಯುಎಸಿ ಸಂಯೋಜಕ ವಿವೇಕ್ ಚಾರ್ಲ್ಸ್, ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಂ.ಶಿವಪ್ರಸಾದ್ ಪಾಲ್ಗೊಂಡಿದ್ದರು