ಹುಣಸೂರು ನಗರದ ವಕೀಲರ ಭವನದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಸಮಾರಂಭಲ್ಲಿ ಶ್ರೀ ಕನಕದಾಸರ ಪ್ರತಿಮೆಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಟಿ.ಗೋವಿಂದಯ್ಯ, ಅನಿತಾ, ಆಯಿಷಾಬಿ ಪಿ.ಮಜಿದ್, ಭಾಗ್ಯಮ್ಮ, ಎಸ್.ಶಿವಣ್ಣೇಗೌಡ, ಕಲ್ಕುಣಿಕೆ ಮಂಜುನಾಥ್, ಶ್ವೇತಾ, ಶಿಲ್ಪಾ ಇತರರು ಇದ್ದರು.  
ಮೈಸೂರು

ಕೀರ್ತನೆಗಳ ಮೂಲಕ ಅರಿವು ಮೂಡಿಸಿದ ದಾಸಶ್ರೇಷ್ಠ

ಹುಣಸೂರು: ತಾಲೂಕು ವಕೀಲರ ಸಂಘದ ವತಿಯಿಂದ ಭಕ್ತ ಕನಕದಾಸರ 539ನೇ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ನಗರದ ನ್ಯಾಯಾಲಯ ಆವರಣದಲ್ಲಿನ ವಕೀಲರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಕನಕದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯ, 16ನೇ ಶತಮಾನದಲ್ಲಿ ಸಮಾಜದಲ್ಲಿನ ಅಸಮಾನತೆ, ಅನಿಷ್ಠ ಪದ್ಧತಿಗಳ ಕುರಿತು ದಾಸಶ್ರೇಷ್ಠ ಶ್ರೀ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಅರಿವು ಮೂಡಿಸಿದರು. ಜಾತಿ, ಮತ, ಪಂಥಗಳನ್ನು ಮೀರಿ ಮಾನವೀಯತೆಯೇ ನಿಜವಾದ ಧರ್ಮವೆನ್ನುವುದನ್ನು ಸಾರಿದರು. ಅವರ ಜೀವನಾದರ್ಶಗಳು ನಮಗೆ ಇಂದಿಗೂ ದಾರಿದೀಪವಾಗಿದೆ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಪಿ.ಮಜಿದ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ಶಿವಣ್ಣೇಗೌಡ, ಕಾರ್ಯದರ್ಶಿ ಎಚ್.ಜೆ ಸಂದೀಪ್, ಸರ್ಕಾರಿ ವಕೀಲ ಕಲ್ಕುಣಿಕೆ ಮಂಜುನಾಥ, ವಕೀಲರಾದ ಸಿ.ಮಹದೇವ್, ಕೆ.ಎನ್ ಮಲ್ಲೇಶ್, ಕೆ.ಸತೀಶ್, ಎಸ್.ಬಿ ಮೂರ್ತಿ, ಬಿ.ಎ.ಸುರೇಶ್ ಕುಮಾರ್, ಎಸ್.ಪ್ರಸನ್ನ, ಪುಟ್ಟರಾಜು.ಕೆ, ಸ್ವಾಮಿಗೌಡ, ಎ.ಮಹದೇವ, ಧರ್ಮಪುರ ಡಿ.ಪಿ ಮಹದೇವ್, ರಮೇಶ್, ಲಕ್ಷ್ಮೀಕಾಂತ್, ಎಂ.ಎನ್ ರಾಘವೇಂದ್ರ, ಸಿ.ಕೆ.ಮಂಜುನಾಥ್, ಬಿ.ಎಂ.ತಾಂಡವಮೂರ್ತಿ, ಕಿರಣ್ ಬಿ, ಶ್ರೀನಿವಾಸ್, ಕವಿತಾ ಪ್ರಸನ್ನ, ಕುಮಾರಿ ಇಂಚರ, ಧನಲಕ್ಷಿ, ಶ್ವೇತಾ, ಶಿಲ್ಪಾ, ಅಂಜು ಇತರರು ಹಾಜರಿದ್ದರು.