ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಶನಿವಾರ ಮೆಗಾಸ್ಟಾರ್ ಡ್ಯಾನ್ಸ್ ಕ್ಲಾಸ್ ಕೇಂದ್ರದ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ಆರೋಗ್ಯ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಡಾ.ವೆಂಕಟರಾಜು ಉದ್ಘಾಟಿಸಿದರು. ಧನಂಜಯ, ಮರಿಸ್ವಾಮಿ, ಮಾದೇಶ್, ಎಂ.ಮಹದೇವ್, ರಘುನಂದನ್, ಕೆಇಬಿ ಸಿದ್ದಲಿಂಗಸ್ವಾಮಿ, ಉತ್ತಂಬಳ್ಳಿ ನಾಗರಾಜು ಇತರರು ಇದ್ದರು.
ತಿ.ನರಸೀಪುರ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೃತ್ಯ ಕಲೆ ಸಹಾಯಕವಾಗಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ನೃತ್ಯ ಸೇರಿ ಸಾಂಸ್ಕೃತಿಕ ಕಲೆಗಳತ್ತಲೂ ಗಮನ ನೀಡಬೇಕು ಎಂದು ಆರೋಗ್ಯ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಡಾ.ವೆಂಕಟರಾಜು ಹೇಳಿದರು.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಶನಿವಾರ ರಾತ್ರಿ ಮೆಗಾಸ್ಟಾರ್ ಡ್ಯಾನ್ಸ್ ಕ್ಲಾಸ್ ಕೇಂದ್ರದ 10ನೇ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.
ನೃತ್ಯ ನಿರ್ದೇಶಕ ಮೂಗೂರು ಸುಂದರಂ, ಅವರ ಪುತ್ರ ನಟ ಪ್ರಭುದೇವ್ ಅವರು ಈ ತಾಲೂಕಿನವರಾಗಿದ್ದಾರೆ. ಇದೇ ಸ್ಥಳದಲ್ಲಿ ರಘುನಂದನ್ ನೃತ್ಯ ಶಾಲೆಯು ತಾಲೂಕಿನ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ಕಲ್ಪಿಸಿದೆ. ರಘುನಂದನ್ ಪರಿಶ್ರಮದಿಂದ ನೃತ್ಯ ಅಕಾಡೆಮಿ ನಿರಂತರವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಕೋರಿದರು.
ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮರಿಸ್ವಾಮಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಠಾಣೆಯ ನಿರೀಕ್ಷಕ ಧನಂಜಯ, ರೈತ ಮುಖಂಡ ಕಿರಗಸೂರು ಶಂಕರ್, ತಾಪಂ ಇಒ ರಂಗಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಪಿಎಚ್.ಡಿ ಪದವಿ ಪಡೆದ ಪೊಲೀಸ್ ಇಲಾಖೆಯ ತಲಕಾಡು ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಜೀ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು, ಯೋಗೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಂ ಪ್ರಕಾಶ್, ಕರಾಟೆ ಮಾಸ್ಟರ್ ಸೋಸಲೆ ಸಿದ್ದರಾಜು, ಕೆಇಬಿ ಸಿದ್ದಲಿಂಗಸ್ವಾಮಿ, ಡಾ.ಎಂ.ಮಾದೇಶ್, ಹರೀಶ್ ಹೋಟೆಲ್ ಸದಾಶಿವ, ಕಿರಗಸೂರು ಪ್ರಸಾದ್ ನಾಯಕ್, ಎಂ. ಮಹದೇವ್, ಸೋಸಲೆ ಗಿರಿಮಲ್ಲೇಶ್, ಮೂಗೂರು ಕುಮಾರಸ್ವಾಮಿ, ನೃತ್ಯ ನಿರ್ದೇಶಕ ರಘುನಂದನ್, ಶಿಕ್ಷಕರಾದ ಸಿದ್ದರಾಜು, ಮುರುಳೀಧರ್, ಉತ್ತಂಬಳ್ಳಿ ನಾಗರಾಜು, ಜಾಕ್ಸನ್ ಶಿವು ಸೇರಿದಂತೆ ಅನೇಕರು ಹಾಜರಿದ್ದರು.