released  
ಮೈಸೂರು

ಮೇ 17 ರಂದು ಡಬಮ್ ಎಂ.ರಮೇಶ್ ಅವರ ಆತ್ಮಕಥನ 'ಸಾರ್ಥಕ ಬದುಕು' ಬಿಡುಗಡೆ

ಪ್ರಮುಖ ಮುಖ್ಯಾಂಶಗಳು

  • ಮಾನಸಿಕ ಆರೋಗ್ಯ ಕ್ಷೇತ್ರದೊಂದಿಗಿನ ಜೀವನದ ಪಯಣವನ್ನು ಒಳಗೊಂಡ ಪುಸ್ತಕ
  • ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಲೋಕಾರ್ಪಣೆ
ಮೈಸೂರು : ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ 33 ವರ್ಷದಿಂದ ತೊಡಗಿಸಿಕೊಂಡು ಲಕ್ಷಾಂತರ ಮಂದಿಗೆ ಮಾನಸಿಕ ಪುನರ್ವಸತಿ ಕಲ್ಪಿಸಿದ ಕಡಬಮ್ಸ್ ಗ್ರೂಪ್ ವತಿಯಿಂದ ಕಡಬಮ್ ಎಂ.ರಮೇಶ್ ಅವರ ಆತ್ಮಕಥನ 'ಸಾರ್ಥಕ ಬದುಕು' ಬಿಡುಗಡೆ ಕಾರ್ಯಕ್ರಮವನ್ನು ಮೇ 17 ರಂದು ಬೆಳಗ್ಗೆ 10 ಗಂಟೆಗೆ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಬಳಿಯ ಜಗನ್ನಾಥ್ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಡಬಮ್ಸ್ ಗ್ರೂಪ್‌ನ ನಿರ್ದೇಶಕರೂ ಆದ ಮನಃಶಾಸ್ತçಜ್ಞ ರಾಜಶೇಖರ್ ಹಿರೇಮಠ್ ಅವರು, ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಎಸ್.ಎ. ರಾಮದಾಸ್, ಅಖಿಲ ಭಾರತ ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ, ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕ ಎಂ.ವಿ. ಶ್ರೀನಿವಾಸಮೂರ್ತಿ, ಬೆಳಗಾವಿಯ ರಿಟಾ ಡಿಸೋಜಾ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ಕಡಬಮ್ ಎಂ ರಮೇಶ್ ಅವರು ಬುದ್ದಿ ಮಾಂಧ್ಯತೆಗೆ ಒಳಗಾಗಿದ್ದ ತಮ್ಮ ಸಹೋದರಿ ಅಮಿತಾ ಅವರಿಗೆ ಮಾನಸಿಕ ಪುನರ್ವಸತಿ ಕಲ್ಪಿಸಲು ಸಂಸ್ಥೆಗಳನ್ನು ಹುಡುಕುವ ಸಂದರ್ಭದಲ್ಲಿ ಯಾವುದೇ ವಿಶೇಷ ಕೇಂದ್ರಗಳು ಅಸ್ಥಿತ್ವದಲ್ಲಿಲ್ಲ. ಹೀಗಾಗಿ ಅವರು ತಮ್ಮ ಮನೆಯಲ್ಲಿಯೇ ತಮ್ಮ ತಂಗಿಗಾಗಿಯೇ ವಿಶೇಷ ಪುನರ್ವಸತಿ ಕಾರ್ಯ ಆರಂಭಿಸಿದರು. ನಂತರದ ದಿನಗಳಲ್ಲಿ ಎಲ್ಲರಿಗೂ ಈ ಸೇವೆ ನಿಲುಕುವಂತಾಗಬೇಕೆAದು ಆಲೋಚಿಸಿ, 1992 ರಲ್ಲಿ ಕಡಬಮ್ಸ್ ಗ್ರೂಪ್ಸ್ ವತಿಯಿಂದ ಮಾನಸಿಕ ಆರೋಗ್ಯ ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರ ಆರಂಭಿಸಿದರು. ಈಗ ಇದು ಭಾರತದ ಅತಿ ದೊಡ್ಡ ಖಾಸಗಿ ಮಾನಸಿಕ ಆರೋಗ್ಯ ಪುನರ್ವಸತಿ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಬೆಂಗಳೂರು, ಮೈಸೂರು ಮತ್ತು ಹೈದರಾಬಾದ್ ನಲ್ಲಿ 18ಕ್ಕೂ ಹೆಚ್ಚು ವಿಶೇಷ ಕೇಂದ್ರಗಳನ್ನು ಹೊಂದಿ, ವರ್ಷಕ್ಕೆ 1500ಕ್ಕೂ ಹೆಚ್ಚು ವ್ಯಕ್ತಿಗಳನ್ನು ಗುಣಪಡಿಸಿ ಸಮಾಜಕ್ಕೆ ಮರಳಿಸುತ್ತಿದೆ. 200ಕ್ಕೂ ಹೆಚ್ಚು ಮಾನಸಿಕ ಆರೋಗ್ಯ ತಜ್ಞರು ಮತ್ತು ಒಂದು ಸಾವಿರಕ್ಕೂ ಹೆಚ್ಚು ಹಾಸಿಗೆಗಳೊಂದಿಗೆ, 40,000ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯಸ್ತ ನೀಡಿದೆ. ಯಾವೊಬ್ಬ ಮಾನಸಿಕ ತಜ್ಞರೂ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮಾಡಲಾಗದ ಸಾಧನೆಯನ್ನು ರಮೇಶ್ ಅವರು ಮಾಡಿ ತೋರಿಸಿದ್ದಾರೆ. ಈ ಸಾಧನೆಯ ಪಯಣವನ್ನು ಹಾಗೂ ತಮ್ಮ ಜೀವನದ ಅನುಭವಗಳನ್ನು ಒಳಗೊಂಡAತೆ 'ಸಾರ್ಥಕ ಬದುಕು' ಆತ್ಮಕಥನವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ರಾಜಶೇಖರ್ ಹಿರೇಮಠ್ ಅವರು ಮಾಹಿತಿ ನೀಡಿದ್ದಾರೆ.