ದ.ರಾ. ಬೇಂದ್ರೆ  
ಮೈಸೂರು

ಸಾಹಿತ್ಯ ಲೋಕಕ್ಕೆ ದ.ರಾ. ಬೇಂದ್ರೆ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಸಂದರ್ಶಕ ಪ್ರಾಧ್ಯಾಪಕ ಕೆ.ಸಿ ಶಿವಾರೆಡ್ಡಿ ಹೇಳಿಕೆ
  • ದ.ರಾ. ಬೇಂದ್ರೆ ಒಬ್ಬ ದಾರ್ಶನಿಕ ಕವಿ
ಮೈಸೂರು: ಕನ್ನಡ ಸಾಹಿತ್ಯ ಲೋಕಕ್ಕೆ ದ.ರಾ. ಬೇಂದ್ರೆ ಅವರ ಕೊಡುಗೆ ಅಪಾರ. ಅವರು ಒಬ್ಬ ದಾರ್ಶನಿಕ ಕವಿಯೂ ಆಗಿದ್ದರು ಎಂದು ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಕೆ.ಸಿ ಶಿವಾರೆಡ್ಡಿ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ, ನಿರ್ದಿಗಂತ ಶೈಕ್ಷಣಿಕ ಮತ್ತು ಸಾಂಸ್ಕೃತಿ ಟ್ರಸ್, ದೇಶಿ ಕ್ರಿಯೇಷನ್ಸ್ ಸಹಯೋಗದಲ್ಲಿ ನಗರದ ಹೊರವಲಯದ ಬೋಗಾದಿಯ ಎಸ್‌ಬಿಎಂ ಬಡಾವಣೆಯ ಪುಸ್ತಕಲೋಕದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಬೇಂದ್ರೆ ಸಾಹಿತ್ಯದ ಆಶಯ ಕುರಿತು ಮಾತನಾಡಿದರು. 
ಈಗಿನ ಕಾಲಕ್ಕೆ ಬೇಂದ್ರೆ ಮತ್ತು ಕುವೆಂಪು ಎರಡು ಕಣ್ಣುಗಳಿದ್ದಂತೆ. ಅದರ ನೋಟ ಒಂದೇ. ಅವರನ್ನು ಓದುವ ಹಿಂದಿನ ಕ್ರಮವನ್ನು ಪಕ್ಕಕ್ಕೆ ಸರಿಸಬೇಕಿದೆ. ಕುವೆಂಪು ಮತ್ತು ಬೇಂದ್ರೆ ಅವರ ಆಶಯ, ಪ್ರಾರ್ಥನೆ ಎರಡೂ ಒಂದೇ ಎಂದರು.
ಸಮಾಜದ ಕಣ್ಣಿಗೆ ಜಿಡ್ಡು ಅಂಟಿಕೊಂಡಿದೆ. ಅದನ್ನು ಒರೆಸಿಕೊಳ್ಳದೆ ಹೊಸತನ್ನು ಕಾಣಲು ಸಾಧ್ಯವಿಲ್ಲ. ನೋಡು ಕ್ರಮ ಸ್ಪಷ್ಟವಾಗಿ ಪರಿವರ್ತನೆಯಾಗಬೇಕದೆ. ಇದನ್ನೇ ಬೇಂದ್ರೆ ಹಾಗೂ ಕುವೆಂಪು ನುಡಿದಿದ್ದರು, ಹಾಗೇ ಬರೆದರೂ ಕೂಡ ಎಂದರು.
ಬೇಂದ್ರೆ ಮತ್ತು ಕುವೆಂಪು ನಡುವೆ ದೊಡ್ಡಸ್ಥಿಕೆಯ ಅಂತರ ಹುಟ್ಟಿಹಾಕುತ್ತಿದ್ದೇವೆ. ಅವರನ್ನು ಸರಿಯಾಗಿ ಓದುವ ಕೆಲಸವಾಗಿಲ್ಲ. ಈ ಕಾಲಕ್ಕೆ ಅಗತ್ಯವಿಲ್ಲದ ವಿಚಾರ ತಲೆಯ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ, ಚಿಕ್ಕಮಗಳೂರು ಗಣೇಶ್, ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಪ್ರೊ.ಎಸ್.ಚಂದ್ರಕಿರಣ್ ಕುಳವಾಡಿ, ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ ಬೆಟ್ಟಸ್ವಾಮಿ ಇನ್ನಿತರರಿದ್ದರು.