- ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ
- ಮೋಸಕ್ಕೆ ಒಳಗಾದವರು ನೀಡಿದ ದೂರಿನ ಆಧಾರದ ಮೇಲೆ ಸೆನ್ ಠಾಣೆಯ ಪೊಲೀಸರಿಂದ ತನಿಖೆ
ಮೈಸೂರು: ಷೇರು ಮಾರುಕಟ್ಟೆ ಹೆಸರಿನಲ್ಲಿ ಆನ್‌ಲೈನ್ ವಂಚಕರು ವಿಜಯನಗರದ ವೃದ್ಧರೊಬ್ಬರಿಂದ 27 ಲಕ್ಷ ರೂ. ದೋಚಿದ್ದಾರೆ.
ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ಆಸೆ ಹುಟ್ಟಿಸಿದ್ದಾರೆ.
ಅದರಂತೆ ಆಕೆ ನೀಡಿದ ಬ್ಯಾಂಕ್ ಖಾತೆಗಳಿಗೆ ಹಲವು ಬಾರಿ ಹಣವನ್ನು ಜಮೆ ಮಾಡಿದ್ದಾರೆ. ಹಂತ ಹಂತವಾಗಿ 27 ಲಕ್ಷ ರೂ. ವರ್ಗಾವಣೆ ಸಹ ಮಾಡಲಾಗಿದೆ. ಬಳಿಕ ನಿಮ್ಮ ಹಣಕ್ಕೆ ಷೇರು ಮಾರುಕಟ್ಟೆಯಲ್ಲಿ ಲಾಭ ಬಂದಿದೆ ಎಂದು ಕೋಟಿ ಹಣವನ್ನು ತೋರಿದ್ದಾರೆ.
ಈ ಹಣ ವಾಪಸ್ ಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಬಳಿಕವೇ ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದೆ.
ಮೋಸಕ್ಕೆ ಒಳಗಾದವರು ನೀಡಿದ ದೂರಿನ ಆಧಾರದ ಮೇಲೆ ಸೆನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.