- ನಾಯಕ ನಟ ಝೈದ್‌ಖಾನ್ ಮಾಹಿತಿ
- ಚಿತ್ರದ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಸ್ಪಂದನೆ
ಮೈಸೂರು: ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ‘ಕಲ್ಟ್’ ಸಿನಿಮಾ ಜ.23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಇದು ವಿಭಿನ್ನ ಕಥಾಹಂದರ ಹೊಂದಿದೆ. ನಾನು ಮೂರು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು,
ಅನಿಲ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ನಟಿ ರಚಿತಾ ರಾಮ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಮಲೈಕಾ ಸಹ ನಟಿಸಿದ್ದಾರೆ ಎಂದು ಚಿತ್ರದ ನಾಯಕ ನಟ ಝೈದ್ ಖಾನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದಿನ ನನ್ನ ಚಿತ್ರಕ್ಕೂ, ಇದಕ್ಕೂ ವ್ಯತ್ಯಾಸ ಇದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯಿಂದ ಮೋಸ ಹೋಗುತ್ತಿರುವ ವರ್ಗದ ಕುರಿತು ಚಿತ್ರ ಕಥೆಯನ್ನು ತೆರೆಯ ಮೇಲೆ ತೋರಿಸಲಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕುಟುಂಬ ಸಮೇತ ಚಿತ್ರವನ್ನು ವೀಕ್ಷಿಸಬಹುದಾಗಿದೆ ಎಂದರು.
ರಾಜ್ಯದಲ್ಲಿ ಚಿತ್ರಮಂದಿರಗಳ ಅಭಾವ ಇರುವುದು ನಿಜ. ನಮ್ಮ ಚಿತ್ರದ ಬಿಡುಗಡೆ ದಿನವೇ ದುನಿಯಾ ವಿಜಯ್ ಅವರ ಲ್ಯಾಂಡ್ ಲಾರ್ಡ್ ಚಿತ್ರವು ಬಿಡುಗಡೆ ಇರುವುದರಿಂದ ಇಬ್ಬರಿಗೂ ಸಮಾನವಾಗಿ ಥಿಯೇಟರ್‌ಗಳನ್ನು ಹಂಚಿಕೆ ಮಾಡಲಾಗಿದೆ.
ಸಾಮಾನ್ಯ ಜನರು ಟಿಕೆಟ್ ದರ ಹೆಚ್ಚಳವಿರುವುದರಿಂದ ಮಲ್ಟಿಫ್ಲೆಕ್ಸ್‌ಗೆ ಹೋಗಿ ಚಿತ್ರ ನೋಡುವುದು ಕಡಿಮೆ. ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕರೂಪ ಟಿಕೆಟ್ ನೀತಿ ಅನುಷ್ಠಾನಗೊಳಿಸಿದ್ದರು. ಇದಕ್ಕೆ ಕೆಲವರು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಬೇರೆ ರಾಜ್ಯಗಳಲ್ಲಿ ಇರುವ ರೀತಿ ಏಕರೂಪದ ಟಿಕೆಟ್ ದರ ಇಲ್ಲಿಯೂ ಅನುಷ್ಠಾನಕ್ಕೆ ಬರಬೇಕಿದೆ ಎಂದರು.
ನನಗೆ ರಾಜಕೀಯ ಇಷ್ಟವಿಲ್ಲ. ಈ ಹಿಂದೆಯೇ ಸಿದ್ದರಾಮಯ್ಯ ಅವರು 2023ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿ-ಫಾರ್ಮ್ ನೀಡಿದ್ದರು. ನಾನು ಅದನ್ನು ತೆಗೆದು ಕೂಡ ನೋಡಲಿಲ್ಲ. ರಾಜಕೀಯಕ್ಕೆ ಬರಬೇಕು ಎಂದು ನಿರ್ಧರಿಸಿದರೆ, ರಾಜ್ಯದ ಕಿರಿಯ ಶಾಸಕನಾಗುತ್ತಿದೆ. ಆದರೆ, ನನಗೆ ಅದು ಇಷ್ಟವಿಲ್ಲ. ಸಿನಿಮಾದಲ್ಲೇ ಮುಂದುವರಿಯುತ್ತೇನೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.