ನಗರದ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಶನಿವಾರ ಕಬ್ಬನ್ ಪಾರ್ಕ್ ಕುರಿತು ಕೃತಿಯ ಉಪನ್ಯಾಸ, ಪುಸಕ್ತ ಪ್ರದರ್ಶನ ಆಯೋಜಿಸಲಾಗಿತ್ತು. ಸುರೇಶ್ ಜಯರಾಮ್, ಆನಂದ್‌ಕೃಷ್ಣಮೂರ್ತಿ, ಶ್ರೀನಾಥ್ ಭದ್ರಮ್, ಪಲ್ಲವಿ ತರಂಗ್ ಪವಾರ್, ಮದ್ವೇಶ್ ಎನ್.ಪಾಂಡುರಂಗಿ ಇದ್ದರು. 
ಮೈಸೂರು

‘ಕಬ್ಬನ್ ಪಾರ್ಕ್’ ನಾಗರೀಕತೆಯ ಜೀವಂತ ದಾಖಲೆ:ಸುರೇಶ್ ಜಯರಾಮ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಕಬ್ಬನ್ ಪಾರ್ಕ್ ಕೇವಲ ನಗರದ ಹಸಿರು ಪ್ರದೇಶವಾಗಿ ಮಾತ್ರವಲ್ಲದೇ ಹಲವು ನೆನಪುಗಳ ಸುರುಳಿ
  • ಉದ್ಯಾನದೊಂದಿಗೆ ಅನೇಕರಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ
ಮೈಸೂರು:ಬೆಂಗಳೂರಿನ ಕಬ್ಬನ್ ಪಾರ್ಕ್ ಕುರಿತು ಕಲಾವಿದ, ಲೇಖಕ ಸುರೇಶ್ ಜಯರಾಮ್ ಅವರು ರಚಿಸಿರುವ ಕೃತಿಯ ಕುರಿತು ಉಪನ್ಯಾಸ, ಪುಸಕ್ತ ಪ್ರದರ್ಶನ ಆಯೋಜಿಸಲಾಗಿತ್ತು.
ಚಾಮರಾಜಪುರಂನ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ (ಡಬ್ಲುೃಸಿಎಫ್‌ಎ) ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ಜಯರಾಮ್, ಬೆಂಗಳೂರಿನ ಐತಿಹಾಸಿಕ ಮಹತ್ವ ಹೊಂದಿರುವ ಸಾರ್ವಜನಿಕ ಸ್ಥಳಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಕೇವಲ ನಗರದ ಹಸಿರು ಪ್ರದೇಶವಾಗಿ ಮಾತ್ರವಲ್ಲದೇ ಹಲವು ನೆನಪುಗಳ ಸ್ಮತಿ, ಸಂಸ್ಕೃತಿ, ಪ್ರಜಾಪ್ರಭುತ್ವ, ನಾಗರಿಕತೆಯ ಜೀವಂತ ದಾಖಲೆಯಾಗಿದೆ ಎಂದು ವಿಶ್ಲೇಷಿಸಿದರು.
‘ಕಬ್ಬನ್ ಪಾಕ್: ಸಿಟಿಜನ್ಸ್ ಪರ್ಸ್ಪೆಕ್ಟಿವ್ಸ್ ಆ್ಯಂಡ್ ಮೆನಿ ವಿಷನ್ಸ್ ಫಾರ್ ದಿ ಫ್ಯೂಚರ್’ ಕೃತಿಯಲ್ಲಿ ನಾಗರೀಕರ ಅಭಿಪ್ರಾಯ, ಉದ್ಯಾನದೊಂದಿಗೆ ಅವರಿಗೆ ಇರುವ ಭಾವನಾತ್ಮಕ ಸಂಬಂಧವನ್ನು ಬೆಸೆಯಲಾಗಿದೆ ಎಂದು ಹೇಳಿದರು.
ಪವರ್ ಪ್ರೆಸೆಂಟೆಷನ್ ಮೂಲಕ ಕಬ್ಬನ್ ಪಾರ್ಕ್ ಸೇರಿದಂತೆ ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಪರಿಚಯ ಮಾಡಿಕೊಡಲಾಯಿತು.
ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಪ್ರಾಂಶುಪಾಲ ಆನಂದ್‌ಕೃಷ್ಣಮೂರ್ತಿ, ಆಡಳಿತಾಧಿಕಾರಿ ಶ್ರೀನಾಥ್ ಭದ್ರಮ್, ಸಹಾಯಕ ಪ್ರಾಧ್ಯಾಪಕಿ ಪಲ್ಲವಿ ತರಂಗ್ ಪವಾರ್, ಅಧ್ಯಾಪಕ ಮದ್ವೇಶ್ ಎನ್.ಪಾಂಡುರಂಗಿ ಇತರರು ಇದ್ದರು.