- ಮಗಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣ
- ಹ್ಯಾಕ್ ಮಾಡಿ ವಂಚಕರು ಹಣವನ್ನು ಇನ್ನೊಂದು ಖಾತೆ ವರ್ಗಾವಣೆ
- ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮೈಸೂರು: ಮಗಳ ಶಿಕ್ಷಣಕ್ಕಾಗಿ ಕೂಡಿಟ್ಟ ಎರಡು ಲಕ್ಷ ರೂ. ಹಣವನ್ನು ಖದೀಮರು ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ದೋಚಿದ್ದಾರೆ.
ನಜರ್‌ಬಾದ್ ನಿವಾಸಿ ಸಂತೋಷ್ ಕುಮಾರ್ ಹಣ ಕಳೆದುಕೊಂಡವರು.
ಇವರು ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ 2 ಲಕ್ಷ ರೂ. ಹಣವನ್ನು ಖಾಸಗಿ ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಲ್ಲಿ ಬಹಳ ದಿನಗಳಿಂದ ಇಟ್ಟಿದ್ದರು.
ಈ ಸಂದರ್ಭದಲ್ಲಿ ಇವರ ಮೊಬೈಲ್‌ಗೆ 2 ಲಕ್ಷ ರೂ. ಕಡಿತಗೊಂಡಿರುವ ಸಂದೇಶ ಬಂದಿದೆ. ಗಾಬರಿಗೊಂಡ ಇವರು ತಕ್ಷಣ ಬ್ಯಾಂಕ್‌ಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ಆಗಲೇ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ವಂಚಕರು ಹಣವನ್ನು ಇನ್ನೊಂದು ಖಾತೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.