ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಆತ್ಮಹತ್ಯೆಗೆ ಶರಣಾದ ಹರೀಶ್= ಹರೀಶ್ ಕುಟುಂಬ. 
ಮೈಸೂರು

ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

ಎ. ಆರ್. ರಘುರಾಮ
ಹುಣಸೂರು : ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ತಾನೂ ನೇಣಿಗೆ ಶರಣಾಗಿರುವ ಘಟನೆ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬಡಾವಣೆಯ ನಿವಾಸಿ ಹರೀಶ್ ಯಾನೆ ಸ್ಯಾಡೂ ಹರೀಶ್ (42) ಎಂಬಾತ ಪತ್ನಿ ನಿಶ್ಚಿತಾ (36) ಮತ್ತು ಇವರ ಮಕ್ಕಳಾದ ನಿಕ್ಷಾ(13), ರಕ್ಷಾ(6) ಮೃತರು. ಮನೆಯ ನೆಲ ಅಂತಸ್ತಿನಲ್ಲಿ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳ ಬಾಯಿ ಮತ್ತು ಮೂಗಿಗೆ ಪ್ಲಾಸ್ಟರ್ ಅಂಟಿಸಿ ಉಸಿರು ಕಟ್ಟಿಸಿ ಕೊಲೆ ಮಾಡಿದ ಹರೀಶ್, ನಂತರ ಆರ್‌ಸಿಸಿಗೆ ಹಾಕಿದ್ದ ಕೊಂಡಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಯಾರೂ ಹೊರಬಂದಿರಲಿಲ್ಲ. ಮನೆಗೆಲಸ ಮಹಿಳೆ ಮತ್ತು ನೆರೆಹೊರೆಯವರು ಅನುಮಾನದಿಂದ ಕಿಟಕಿಯಲ್ಲಿ ನೋಡಿದಾಗಲಷ್ಟೇ ಘಟನೆ ಬೆಳಕಿಗೆ ಬಂದಿದೆ.
ಸುಂದರ ಕುಟುಂಬದ ದುರಂತ:
ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದ ಹರೀಶ್ ವಾಹನಗಳಿಗೆ ಸಾಲ ಕೊಡಿಸುವ ಮತ್ತು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ. ಸೋಮವಾರ ಸಂಜೆ ವೇಳೆಗೆ ತನ್ನ ಸ್ನೇಹಿತರ ಮತ್ತು ಆಪ್ತಬಳಗದ ವಾಟ್ಸ್ ಆ್ಯಪ್ ಗ್ರೂಪಿನಿಂದ ಎಕ್ಸಿಟ್ ಆಗಿದ್ದ. ಕೆಲವರ ಬಳಿ ನನ್ನ ವ್ಯವಹಾರವನ್ನೆಲ್ಲಾ ಸಂಪೂರ್ಣವಾಗಿ ಪರಿಹರಿಸಿಕೊಂಡಿದ್ದೇನೆ ಎಂದು ವಿವರಿಸಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಎಸ್‌ಪಿ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ ಪಿ ರವಿ. ಇನ್ಸ್ ಪೆಕ್ಟರ್ ಶಿವಮಾದಯ್ಯ ಭೇಟಿ ಇತ್ತು ಪರಿಶೀಲಿಸಿದ್ದಾರೆ. ಶ್ವಾನದಳ, ಫಿಂಗರ್ ಪ್ರಿಂಟ್, ಪೊರೆನ್ಸಿಕ್ ತಂಡದ ತಜ್ಞರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.
ಡೆತ್‌ನೋಟ್ ಬರೆದಿಟ್ಟಿದ್ದಾರೆ: ಈ ಸಂದರ್ಭ ಮಾತನಾಡಿದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಕುಟುಂಬದ ಯಜಮಾನ ಹರೀಶ್ ಮೂರು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾನೆ. ಬೆಡ್ ರೂಮಿನಲ್ಲಿ ಪತ್ನಿ ಮತ್ತು ಕಿರಿಯ ಮಗಳು ಹಾಗೂ ನೆಲದ ಮೇಲೆ ಹಿರಿಯ ಮಗಳ ಮೃತ ದೇಹ ಇದೆ. ಘಟನೆಗೆ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ. ಡೆತ್‌ನೋಟ್ ಆಧಾರದಡಿ ತನಿಖೆ ಮುಂದುವರಿದಿದೆ ಎಂದು ಅವರು ವಿವರಿಸಿದರು.
21ಊಓ1:
21ಊಓ3: ಮನೆಯ ಮುಂಭಾಗ ಜಮಾವಣೆಗೊಂಡಿದ್ದ ಸ್ನೇಹಿತರು ಮತ್ತು ಸಾರ್ವಜನಿಕರು.