ಆರೋಪಿ ಸಿದ್ದೇಶ್ , ಅಮೃತಾ. 
ಮೈಸೂರು

ಪತ್ನಿ ಕುಮ್ಮಕ್ಕಿನಿಂದಲೇ ಪತಿ ಕೊಲೆ

ಎ. ಆರ್. ರಘುರಾಮ
ಸರಗೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎನ್ನಲಾದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಸರಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕುರ್ಣೇಗಾಲ ಗ್ರಾಮದ ಜವರಯ್ಯ ( 38) ಮೃತ ವ್ಯಕ್ತಿ. ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ ಬಿನ್‌ರಾಜೇಗೌಡ(32), ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದ ಅಮೃತಾ ಕೋಂ.ಜವರಪ್ಪ(26) ಬಂಧಿತರು.
ಘಟನೆ ವಿವರ: ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದ ಜವರಪ್ಪ ಎಂಬುವರು ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾಳೊಂದಿಗೆ ವಿವಾಹವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡ, ಹೆಂಡತಿ ನಡುವೆ ಸಂಸಾರದ ವಿಚಾರದಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.
ಅಮೃತಾ 12 ದಿನಗಳ ಹಿಂದೆ ಮಕ್ಕಳನ್ನು ಕರೆದುಕೊಂಡು ಹಬ್ಬಕ್ಕೆಂದು ತವರು ಮನೆಗೆ ಹೋಗಿದ್ದರು.
ಏ.17ರಂದು ಬೆಳಗ್ಗೆ 6.30ರ ಸಮಯದಲ್ಲಿ ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಜವರಪ್ಪ ಶವವಾಗಿ ಮಲಗಿದ್ದ. ಆತನ ಬಾಯಿ ಮತ್ತು ಮೈಕೈಗಳಿಗೆ ಏಟಾಗಿತ್ತು. ಇದನ್ನು ಗಮನಿಸಿದ ಮೃತನ ಸಹೋದರ ರವಿ ಸರಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೃತನ ಪತ್ನಿ ಅಮೃತಾ ಮತ್ತು ಅದೇ ಗ್ರಾಮದ ಆರೋಪಿ ಸಿದ್ದೇಶ್ ನಡುವೆ ಅಕ್ರಮ ಸಂಬಂಧ ಇತ್ತು. ಪತಿ ಇದ್ದರೆ ಅಕ್ರಮ ಸಂಬಂಧಕ್ಕೆ ತೊಂದರೆಯಾಗಲಿದೆ ಎಂದು ಪತ್ನಿಯ ಕುಮ್ಮಕ್ಕಿನಿಂದಲೇ ಆರೋಪಿ ಸಿದ್ದೇಶನು ಜವರಪ್ಪನನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳ ಸೆರೆಗೆ ಮೈಸೂರಿನ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ ಅವರ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಿದ್ದು, ಸರಗೂರು ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಪಿಎಸ್‌ಐಗಳಾದ ಕಿರಣ್.ಆರ್, ಚಂದ್ರಹಾಸನಾಯಕ, ಆರ್.ಕುಮಾರ್ ಹಾಗೂ ಠಾಣೆಯ ಎಎಸ್‌ಐಗಳಾದ ಶ್ರೀಕಂಠಸ್ವಾಮಿ, ಕೃಷ್ಣಕುಮಾರ್ ಅವರು ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಟೋ ಕ್ಯಾಪ್ಶನ್..
18 ಎಸ್‌ಆರ್‌ಜಿ ,1.2.
ಆರೋಪಿ ಸಿದ್ದೇಶ್ , ಅಮೃತಾ.