ಸರ್ಕಾರಿ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಮಕ್ಕಳ ಮನೆಗೆ ಭೇಟಿ ನೀಡಿ ಕಲಿಕೆಯ ಬಗ್ಗೆ ಮಾಹಿತಿ ಪಡೆದರು. ಮಧುಕುಮಾರ್, ಆನಂದ್, ಮಹದೇವ್, ರಂಗಯ್ಯ, ರೋಹಿತ್ ಇದ್ದರು. 
ಮೈಸೂರು

ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ

ರವಿಕುಮಾರ್ ಪಿ. ಕೆ
ಮೂಗೂರು: ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಮೂಲಕ ಓದಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸರ್ಕಾರಿ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಪಾಲಕರಿಗೆ ಮನವಿ ಮಾಡಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಓದುವ ಪ್ರಗತಿ ಪರಿಶೀಲನೆ ಕಾರ್ಯಕ್ರಮದಡಿ ಮಕ್ಕಳ ಮನೆಗೆ ಭೇಟಿ ನೀಡಿದ ಸಂದರ್ಭ ಕಲಿಕೆಯ ಸ್ಥಿತಿ ಗತಿ ಅವಲೋಕಿಸಿ ಮಾತನಾಡಿ, ಕಲಿಕೆಯಲ್ಲಿ ಸಾಕಷ್ಟು ಮಕ್ಕಳು ಹಿಂದೆ ಉಳಿದಿದ್ದಾರೆ. ಮನೆಯಲ್ಲಿರವವರು ಮೊಬೈಲ್, ಟಿವಿ ವೀಕ್ಷಣೆಯ ದುರಾಭ್ಯಾಸದಿಂದ ದೂರ ಇರಬೇಕು. ಮಕ್ಕಳ ಒಳಿತಿಗಾಗಿ ಕೆಲವು ದಿನಗಳ ಕಾಲ
ಎಲ್ಲವನ್ನೂ ತ್ಯಜಿಸಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಮಕ್ಕಳ ರಾತ್ರಿ ಓದಿಗೆ ಉತ್ತಮ ರೀತಿಯಲ್ಲಿ ಅನುಕೂಲ ಮಾಡಿಕೊಡುವಂತೆ ಪಾಲಕರಿಗೆ ತಿಳಿ ಹೇಳಿದರು. ಅಧ್ಯಾಪಕರಾದ ಮಧುಕುಮಾರ್, ಆನಂದ್, ಮಹದೇವ್, ರಂಗಯ್ಯ, ರೋಹಿತ್ ಉಪಸ್ಥಿತರಿದ್ದರು.