ಕ್ರೈಮ್ 
ಮೈಸೂರು

ಹಸು ಕಳ್ಳತನ

ಅವಿನಾಶ್ ಜೈನಹಳ್ಳಿ
ಮೈಸೂರು: ಸುಮಾರು 20 ಸಾವಿರ ರೂ. ಮೌಲ್ಯದ ಹಸು ಕಳ್ಳತನ ಮಾಡಿರುವ ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್‌ಆರ್ ಮೊಹಲ್ಲಾದ ಬಡೆಮಖಾನ್ ನಿವಾಸಿ ಸೈಯದ್ ಬುರ್ಹಾನ್ ಅವರ ಜೆರ್ಸಿ ಹಸು ಕಳ್ಳತನವಾಗಿದೆ. ಮಂಗಳವಾರ ರಾತ್ರಿ 10 ಗಂಟೆಗೆ ಮನೆ ಮುಂಭಾಗದಲ್ಲಿ ಕಟ್ಟಿ ಹಾಕಿದ್ದ ಹಸು ಬೆಳಗ್ಗೆ ನೋಡಿದಾಗ ಇರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.