ಮುಂಜನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದುಹಾಕಿರುವುದು. 
ಮೈಸೂರು

ಮುಂಜನಹಳ್ಳಿಯಲ್ಲಿ ಚಿರತೆ ದಾಳಿಗೆ ಹಸು ಬಲಿ

ಸಾಲಿಗ್ರಾಮ : ತಾಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಬುಧವಾರ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.
ಗ್ರಾಮದ ನೇತ್ರಾವತಿ ಕುಮಾರ ನಾಯಕ ಅವರ ಹಸುವನ್ನು ಎಂದಿನಂತೆ ಬುಧವಾರ ಬೆಳಗ್ಗೆ ಜಮೀನಿನ ಹತ್ತಿರ ಹೋಗಿ ಹಸು ಮೇಯಿಸಿ, ನೀರು ಕುಡಿಸಿ ಅಲ್ಲೇ ಕಟ್ಟಿಹಾಕಿ ಊಟಕ್ಕೆಂದು ಮನೆಗೆ ಬಂದಿದ್ದಾರೆ. ಈ ವೇಳೆ ಚಿರತೆ ಹಸುವಿನ ಮೇಲೆ ದಾಳಿ ಮಾಡಿ ಕೊಂದುಹಾಕಿದೆ. ಊಟ ಮಾಡಿಕೊಂಡು ಮನೆಯಿಂದ ಜಮೀನಿಗೆ ಹೋದಾಗ ಬಳಿಕ ಊಟ ಮಾಡಿ ಜಮೀನಿಗೆ ಹೋದಾಗ ಹಸು ಮೃತಪಟಿರುವುದು ಗೊತ್ತಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಸುನಿಲ್ ಹಾಲಪ್ಪ , ಮಹದೇವನಾಯಕ, ನರಸಿಂಹನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸುವುದಾಗಿ ತಿಳಿಸಿದ್ದು, ಮೃತಪಟ್ಟ ಹಸು ಮಾಲೀಕರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.