ಪಟ್ಟಣದಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸೋಮವಾರ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾ, ಪಿಹೆಚ್‌ಡಿ ಪದವಿ ಪಡೆದ ಕೆ.ಆರ್.ಲೋಕೇಶ್ ಮತ್ತು ಕೆ.ಎಸ್. ಭಾಸ್ಕರ್‌ರನ್ನು ಕರ್ನಾಟಕ ರಾಜ್ಯ ಸ್ನಾತಕೋತ್ತರ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸಿದ್ದೇಶ್ವರ ಸನ್ಮಾನಿಸಿದರು. ದೈಹಿಕ ಶಿಕ್ಷಕರಾದ ಪ್ರಕಾಶ್, ರಮೇಶ್, ಸೋಮಶೇಖರ್, ಶಿವಕುಮಾರ್, ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 
ಮೈಸೂರು

ನಿರಂತರ ಕಲಿಕೆ ಜ್ಞಾನ ಕೌಶಲ್ಯಕ್ಕೆ ಮಾರ್ಗ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸ್ನಾತಕೋತ್ತರ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸಿದ್ದೇಶ್ವರ ಹೇಳಿಕೆ
ಬನ್ನೂರು : ಶಿಕ್ಷಕರಾದವರು ನಿರಂತರ ಅಭ್ಯಾಸ ಮತ್ತು ಕಲಿಕೆಯಿಂದ ಎನಾದರು ಸಾಧನೆ ಮಾಡಬಹುದು ಎಂದು ಕರ್ನಾಟಕ ರಾಜ್ಯ ಸ್ನಾತಕೋತ್ತರ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸಿದ್ದೇಶ್ವರ ತಿಳಿಸಿದರು.
ಪಟ್ಟಣದ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸೋಮವಾರ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾ, ಪಿಹೆಚ್‌ಡಿ ಪದವಿ ಪಡೆದ ಕೆ.ಆರ್.ಲೋಕೇಶ್ ಮತ್ತು ಕೆ.ಎಸ್. ಭಾಸ್ಕರ್‌ರನ್ನು ಸನ್ಮಾನಿಸಿದ ನಂತರ ಅವರು ಮಾತನಾಡಿದರು.
ವ್ಯಕ್ತಿತ್ವ ವಿಕಸನಕ್ಕೆ ಉನ್ನತ ಶಿಕ್ಷಣ ಮತ್ತು ಸಂಶೋದನೆ ಮಾರ್ಗವಾಗಿದ್ದು, ಕಲಿಯುವ ಹಂಬಲ ಇದ್ದಾಗ ಮಾತ್ರ ಎನಾದರು ಸಾಧನೆ ಮಾಡಬಹುದು ಎನ್ನಲು ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.
ಬಾಲ್ಯದಿಂದಲೇ ಪ್ರತಿಭಾನ್ವಿತರಾಗಿದ್ದ ಇವರು, ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಾ ಇಂದು ನಿರಂತರ ಪರಿಶ್ರಮದಿಂದ ಪಿಹೆಚ್‌ಡಿ ಪದವಿ ಪಡೆದು ಶಿಕ್ಷಕರೆಲ್ಲರಿಗು ಮಾದರಿಯಾಗಿದ್ದಾರೆ .ಶಿಕ್ಷಣಕ್ಕೆ ಮತ್ತು ಕಲಿಕೆಗೆ ಕೊನೆ ಇಲ್ಲ, ಕಲಿಕೆ ನಿರಂತರ, ಕಲಿಕೆಯಿಂದ ಜ್ಞಾನಾರ್ಜನೆಗೆ ನಾಂದಿ ಎಂದು ಹೇಳಿದರು.
ನಂತರ 1998 ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿಪಿಇಡಿ ಪದವಿ ವ್ಯಾಸಂಗ ಮಾಡಿದ ಸ್ನೇಹ ಸಮ್ಮಿಲನ ಸದಸ್ಯರಲ್ಲಿ ಮರಣಹೊಂದಿದ ಕಾಂತರಾಜು, ಪುರುಷೋತ್ತಮ ವಿಕ್ಟರ್, ಸಂಪತ್ತು ರಂಗಸ್ವಾಮಿರವರಿಗೆ ಮೃತರ ಗೌರವಾರ್ಥ ಗೌರವವಂದನೆ ಸಲ್ಲಿಸಿದರು. ದೈಹಿಕ ಶಿಕ್ಷಕರಾದ ಪ್ರಕಾಶ್, ರಮೇಶ್, ಸೋಮಶೇಖರ್, ಶಿವಕುಮಾರ್, ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.