ಸಾಲಿಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡಸ್ವಾಮಿಗೌಡ ಅವರನ್ನು ಅಭಿನಂದಿಸಲಾಯಿತು. ಎಂ.ಎಸ್. ಮಹದೇವ್, ಉದಯಶಂಕರ್, ಪ್ರಭಾಕರ್, ರಮೇಶ್, ಕಂಠಿಕುಮಾರ್, ತಿಪ್ಪೂರು ಮಹದೇವ್ ಇತರರಿದ್ದರು.
- ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮಿಗೌಡ
- ಸಾಲಿಗ್ರಾಮ ತಾಲೂಕು ಬ್ಲಾಕ್ ಕಾಂಗ್ರೆಸ್
- ಶಾದಿಮಹಲ್ ಭವನ
ಸಾಲಿಗ್ರಾಮ: ಸಾಲಿಗ್ರಾಮ ನನ್ನ ಕರ್ಮ ಭೂಮಿ. ಇದನ್ನು ನನ್ನ ಉಸಿರಿರುವವರೆಗೂ ಮರೆಯುವುದಿಲ್ಲ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮಿಗೌಡ ತಿಳಿಸಿದರು.
ಸಾಲಿಗ್ರಾಮ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಶಾದಿಮಹಲ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಈಗಾಗಲೇ ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸುಮಾರು 2000 ಕೋಟಿ ರೂ. ಸಾಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಸಾಲ ವಿತರಿಸಲಾಗುವುದು. ಜತೆಗೆ ಎರಡೂ ಜಿಲ್ಲೆಯ ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಪಡಲಾಗುವುದು ಎಂದರು.
42 ಕೋಟಿ ರೂ. ವೆಚ್ಚದಲ್ಲಿ ಸಾಲಿಗ್ರಾಮಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅನುದಾನ ಬಂದಿದೆ. ಕಾಮಗಾರಿ ಪ್ರಾರಂಭಕ್ಕೆ ಇಲ್ಲಿಯ ಕೆಲವರಿಂದ ಜಾಗದ ಅಡಚಣೆಯಾಗುತ್ತಿದೆ. ಅದಕ್ಕೆ ಬೇರೆ ಕಡೆ ನೋಡುತ್ತಿದ್ದೇವೆ. ಯಾರೇ ಅಡ್ಡಿಯಾದರೂ ಆಸ್ಪತ್ರೆ ಮಾಡುವುದು ಖಚಿತ. ಜತೆಗೆ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಅಗ್ನಿಶಾಮಕ ಠಾಣೆ, ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸಾಲಿಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕೊಟ್ಟಿದ್ದೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ರಮೇಶ್, ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ಕಂಠಿಕುಮಾರ್, ಎಸ್‌ಟಿ ಘಟಕದ ತಾಲೂಕು ಅಧ್ಯಕ್ಷ ತಿಪ್ಪೂರು ಮಹದೇವ್, ವಕ್ತಾರ ಜಾಬೀನ್, ರಾಜ್ಯ ರೈತ ಪರ್ವ ಸಂಘದ ಉಪಾಧ್ಯಕ್ಷ ಕುಮಾರ್, ಮುಖಂಡರಾದ ಬಲರಾಮೇಗೌಡ, ಮಿರ್ಲೆ ನಂದೀಶ್, ನಟರಾಜ್, ಶಾಂತಿರಾಜಯ್ಯ, ವಾಸಿಮ್, ನವೀನ್, ಪ್ರಸನ್ನ ಚೆಲುವನಾಯಕ ಇತರರಿದ್ದರು.