ಸರಗೂರು ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ 140ನೇ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನದ ಅಂಗವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೆ ಸನ್ಮಾನಿಸಲಾಯಿತು.ಶಿವರಾಜು, ನವೀನ್, ಬಸವರಾಜು, ನಾಗೇಂದ್ರ, ಶ್ರೀನಿವಾಸ ಇತ್ತರರಿದ್ದರು. 
ಮೈಸೂರು

ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದು ಕಾಂಗ್ರೆಸ್

ಸರಗೂರು: ಈ ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಸೃಷ್ಟಿಸಿದ್ದು ಕಾಂಗ್ರೆಸ್ ಪಕ್ಷ. ಸ್ವಾತಂತ್ರೃದ ನಂತರ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಎಂದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ಸೋಮವಾರ 140ನೇ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರ ಆದೇಶ ಮೇರೆಗೆ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ಹಾಗೂ ಸರಗೂರು ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಅವರ ನೇತೃತ್ವದಲ್ಲಿ ಹಿರಿಯರಿಗೆ ಸನ್ಮಾನಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ರಾಷ್ಟ್ರನಿರ್ಮಾಣದಲ್ಲಿ ನಿರ್ವಹಿಸಿದ ಪಾತ್ರ ಅನನ್ಯ. ಸ್ವಾತಂತ್ರ್ಯದ ಬಳಿಕ ದೇಶದ ಸವಾರ್ಂಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದರು.
ಕಾಂಗ್ರೆಸ್ ಇಂದಿಗೂ ಬಡವರು, ಶೋಷಿತರು, ಅವಕಾಶ ವಂಚಿತರು ಸೇರಿದಂತೆ ದೇಶದ ನಾಗರಿಕರ ಧ್ವನಿಯಾಗಿದ್ದು, ಸಂವಿಧಾನ, ಪ್ರಜಾಪ್ರಭುತ್ವ ಆಶಯಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ಕಾಂಗ್ರೆಸ್ ಮಹನೀಯರ ತ್ಯಾಗ, ಬಲಿದಾನ ಸ್ಮರಣೀಯ ಎಂದು ಹೇಳಿದರು.
ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ಪಪಂ ಸದಸ್ಯ ಶ್ರೀನಿವಾಸ, ಬ್ಲಾಕ್ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮಂಜುನಾಥ ಮಾತನಾಡಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಚಲುವರಾಜು, ಮಂಜು, ತಿಮ್ಮಯ್ಯ, ಇದಿಯಪ್ಪ, ಇಬ್ರಾಹಿಂ, ಪ.ಪಂ.ಮಾಜಿ ಸದಸ್ಯ ರಂಗನಾಥ, ಮಾದೇವ, ಶಂಬುಲಿಂಗೇಗೌಡ, ಪುಟ್ಟಸ್ವಾಮಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ, ಬಿಲ್ಲಯ್ಯ, ಶ್ರೀನಿವಾಸ್, ಮಣಿಕಂಠ , ನಾಗೇಂದ್ರ ಮೊಳೆಯೂರು ಕಾವಲ್, ಕಳಸೂರು ಬಸವರಾಜ್, ಸಿದ್ದರಾಜು, ಚೈತ್ರಾಸ್ವಾಮಿ, ಮಫಿರುಲ್ಲಾ , ಮಹೇಶ್, ಯಾಸಿನ್, ಮಹಮದ್ ಸೋಯಬ್, ಮುಖಂಡರು, ಕಾರ್ಯಕರ್ತರು ಇತರರಿದ್ದರು.