ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ನಗರದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು. ಎಂ.ಕೆ.ಸೋಮಶೇಖರ್, ಟಿ.ಬಿ.ಚಿಕ್ಕಣ್ಣ, ಎಂ.ಸುನೀಲ್, ಶೋಭಾ ಸುನೀಲ್,ಗುಣಶೇಖರ್, ರವಿಶಂಕರ್, ಜೋಗಿ ಮಹೇಶ್, ಡೇರಿ ವೆಂಕಟೇಶ್, ಲತಾಮೋಹನ್, ವೀಣಾ ಇತರರು ಇದ್ದರು. 
ಮೈಸೂರು

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ರೈಲು ತಡೆದು ಪ್ರತಿಭಟನೆ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ದೇಶದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಿಜೆಪಿ ಸರ್ಕಾರ ಮುಳ್ಳಾಗಿದೆ
  • ಅಸಮರ್ಥ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯಲಿ
ಮೈಸೂರು:ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ನಗರದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು.
ನಗರದ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಮೈಸೂರು-ಕಡಲೂರು ಬಂದರು ಎಕ್ಸ್‌ಪ್ರೆಸ್ ರೈಲನ್ನು ಕೆಲಕಾಲ ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಕೆ.ಆರ್.ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ದೇಶದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಿಜೆಪಿ ಸರ್ಕಾರ ಮುಳ್ಳಾಗಿದೆ. 89 ಪರೀಕ್ಷೆ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಬಿಜೆಪಿ ಸರ್ಕಾರದ ನೈತಿಕ ಹೊಣೆ ಹೊತ್ತು, ಅಸಮರ್ಥ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಸುನೀಲ್, ಶೋಭಾ ಸುನೀಲ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮುಖಂಡರಾದ ರವಿಶಂಕರ್, ಜೋಗಿ ಮಹೇಶ್, ಪಟಾಕಿ ಮಂಜುನಾಥ್, ಪೈಲ್ವಾನ್ ಕೃಷ್ಣ, ಡೇರಿ ವೆಂಕಟೇಶ್, ಮೋಹನ್, ರೂಪೇಶ್, ಮಹ್ಮದ್ ಫಾರೂಖ್, ಜಗನ್ನಾಥ ಭೋವಿ, ಪ್ರತಾಪ್ ರಾವ್ (ಗಣೇಶ್ ) ಕಾಂಗ್ರೆಸ್ ಮಹಿಳಾ ಮುಖಂಡ ರಾದ ವೀಣಾ, ಲತಾ ಮೋಹನ್, ಇಂದಿರಾ, ನಾಗರತ್ನ ಮಂಜುನಾಥ್, ಫಿರ್ದೋಸ್, ಸರಸ್ವತಿ ಇತರರು ಇದ್ದರು.