ಎಚ್‌ವಿಎಸ್ ಮೂರ್ತಿ ಬದುಕು ಹೋರಾಟದ ಅವಲೋಕನ ಕೃತಿಯನ್ನು ಹಿರಿಯ ಸಾಹಿತಿ ಡಾ.ಸಿಪಿಕೆ ಬಿಡುಗಡೆ ಮಾಡಿದರು. ಸ್ವಾಮಿ ಸರ್ವಜಯಾನಂದಜಿ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಕಾರ್ಯದರ್ಶಿ ಎ.ಜಿ. ಸುಧೀರ್, ರಾಜ್ಯ ಪರಿಷತ್ ಸದಸ್ಯ ಚಂದ್ರಮೌಳಿ ಇತರರಿದ್ದರು.
ಪ್ರಸ್ತುತ ಸಮಾಜದಲ್ಲಿ ಮಾನವೀಯತೆ, ಪುಸ್ತಕ ಹಾಗೂ ಸತ್ಯಾಗ್ರಹಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ವಿಷಾದಿಸಿದರು.
ವಿಶ್ವೇಶ್ವರ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ವಕೀಲ ಎಚ್‌ವಿಎಸ್ ಮೂರ್ತಿ ಅವರ 80ನೇ ವರ್ಷದ ಅಭಿನಂದನಾ ಸಮಾರಂಭದಲ್ಲಿ ‘ಎಚ್‌ವಿಎಸ್ ಮೂರ್ತಿ ಬದುಕು ಹೋರಾಟದ ಅವಕಲೋಕನ’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಎಚ್‌ವಿಎಸ್ ಮೂರ್ತಿ ಅವರು ಜ್ಞಾನವೃದ್ಧರು ಹಾಗೂ ತಪೋವೃದ್ಧರೂ ಹೌದು. ಅವರ ನಡೆ- ನುಡಿಯನ್ನು ಸಂಕೇತಿಸುವ ಕೃತಿ ಇದು. ಅವರು ಬದುಕು-ಹೋರಾಟದ ಬಗ್ಗೆ ಕೇಳದವರು ವಿರಳ. ಅಪರೂಪದ ಆತ್ಮೀಯ ಎನಿಸಬಹುದಾದ ಗ್ರಂಥ ಇದಾಗಿದ್ದು, ಅವರು ಬರೆದಿಲ್ಲ. ಆದರೆ ಲಿಪಿಕಾರರ ಮೂಲಕ ಅದನ್ನು ದಾಟಿಸಿದ್ದಾರೆ ಎಂದರು.
ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಜಿ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಕಾರ್ಯದರ್ಶಿ ಎ.ಜಿ. ಸುಧೀರ್, ರಾಜ್ಯ ಪರಿಷತ್ ಸದಸ್ಯ ಚಂದ್ರಮೌಳಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶಾರದ ವಿಲಾಸ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಎಸ್. ನಾರಾಯಣರಾವ್, ನಂಜನಗೂಡಿನ ಸಮಾಜ ಸೇವಕ ಯು.ಎನ್. ಪದ್ಮನಾಭರಾವ್, ಎಂಕೆಬಿಎಸ್ ಅಧ್ಯಕ್ಷ ವಿಶ್ವನಾಥಯ್ಯ ಇತರರಿದ್ದರು. ಇದೇ ವೇಳೆ ಎಚ್‌ವಿಎಸ್ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.