ಹುಣಸೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿದರು. ವಕ್ತಾರ ಲಕ್ಷ್ಮಣ್, ಡಾ.ಬಿ.ಜೆ.ವಿಜಯಕುಮಾರ್, ಅಣ್ಣಯ್ಯನಾಯಕ, ರಮೇಶ್, ಜಯಲಕ್ಷ್ಮೀ, ಕಲ್ಪನಾ, ನೇತ್ರಾವತಿ, ಅಫ್ರೋಜ್, ರಾಜು ಶಿವರಾಜೇಗೌಡ ಇತರರಿದ್ದರು.
ಹುಣಸೂರು: ಬಡವರು, ಶ್ರಮಿಕರ ಬಾಳಿಗೆ ಆಧಾರವಾಗಿದ್ದ ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಹೆಸರಿನಡಿ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಯೋಜನೆಯ ಮೂಲ ಉದ್ದೇಶವನ್ನು ಮೂಲೆಗುಂಪು ಮಾಡಿದೆ ಎಂದು ಆರೋಪಿಸಿ ತಾಲೂಕು ಕಾಂಗ್ರೆಸ್ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.
ನಗರದ ಸಂವಿಧಾನ ವೃತ್ತದಿಂದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು ದಾರಿಯುದ್ದಕ್ಕೂ ನರೇಗಾ ಬಚಾವೋ, ವಿಬಿ ಜಿ ರಾಮ್‌ಜೀ ಹಠಾವೋ ಘೋಷಣೆಗಳನ್ನು ಮೊಳಗಿಸಿದರು.
ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2005ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ ಶ್ರಮಿಕರು, ಕೂಲಿ ಕಾರ್ಮಿಕರು ರೈತರಿಗೆ ಉದ್ಯೋಗ ಭದ್ರತೆ ನೀಡಿತ್ತು. ಪ್ರತಿ ಪಂಚಾಯಿತಿಗೆ ವರ್ಷಕ್ಕೆ 1 ಕೋಟಿ ರೂ.ವರೆಗೂ ಅನುದಾನ ನೀಡಿ ಸಬಲೀಕರಣಗೊಳಿಸಿತು. ತಮ್ಮ ಭಾಗದಲ್ಲಿ ಆಗಬೇಕಾದ ಕಾಮಗಾರಿಗಳ ಕುರಿತು ಪಂಚಾಯಿತಿ, ಗ್ರಾಮಸಭೆಗಳಲ್ಲಿ ಯೋಜನೆ ತಯಾರಿಸುವ ಅಧಿಕಾರವೂ ಇತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಈ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ಗಾಂಧೀಜಿ ಹೆಸರನ್ನು ತೆಗೆದು ಹಾಕಿ ಆರ್‌ಎಸ್‌ಎಸ್‌ನ ಸೂಚನೆಯಂತೆ ಇಡೀ ಯೋಜನೆಯ ಸ್ವರೂಪವನ್ನೇ ಬದಲಾಯಿಸಿದೆ. ಇಂತಹ ಕಾಯ್ದೆ ಜಾರಿಗೊಳ್ಳಬಾರದೆಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಜನಸಾಮಾನ್ಯರು, ಬಡವರು ಬಡವರಾಗಿಯೇ ಇರಬೇಕು, ಸಮಾನತೆಯನ್ನು ಬಿಜೆಪಿ ಸಹಿಸುವುದಿಲ್ಲ. ನರೇಗಾ ಬದಲಿಸಿ ಇಟ್ಟಿರುವ ಹೆಸರು ಕೂಡ ಜನಸಾಮಾನ್ಯರ ಬಾಯಿಗೆ ಸುಲಲಿತವಾಗಿ ಬರಬಾರದು ಎಂಬಂತೆ ಇಟ್ಟಿದ್ದಾರೆ. ಸುಳ್ಳು ಹೇಳುವುದು ಬಿಜೆಪಿ ಮತ್ತು ಇತ್ತೀಚಿಗೆ ಅದರೊಂದಿಗೆ ಸೇರಿಕೊಂಡಿರುವ ಜೆಡಿಎಸ್ ಪಕ್ಷಗಳ ಜಾಯಮಾನ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಂಬಾಕು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಇವರೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ತಂಬಾಕು ರೈತರ ಸಮಸ್ಯೆಗಳನ್ನು ಬಗೆಹರಿಸದೆ ಕೇವಲ ನೆಪಕ್ಕಾಗಿ ಸಭೆ ನಡೆಸಿ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ ಬಿ.ಜೆ.ವಿಜಯಕುಮಾರ್, ಹುಣಸೂರು ಉಸ್ತುವಾರಿ ರಾಮಪ್ಪ ಬೋವಿ, ಜಿ.ಪಂ. ಮಾಜಿ ಸದಸ್ಯ ಡಿ.ಕೆ.ಕುನ್ನೇಗೌಡ, ಕಾಂಗ್ರೆಸ್ ಮಾಜಿ ಕಾರ್ಯಧ್ಯಕ್ಷ ಪುಟ್ಟರಾಜು ಮಾತನಾಡಿದರು.
ಪಕ್ಷದ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಬ್ಲಾಕ್ ಅಧ್ಯಕ್ಷರಾದ ರವಿಪ್ರಸನ್ನ, ಪ್ರೇಮ್ ಕುಮಾರ್, ಬಾಲಸುಂದರ್, ಮಾಜಿ ಅಧ್ಯಕ್ಷರಾದ ಕಲ್ಕುಣಿಕೆ ರಮೇಶ್, ನಾರಾಯಣ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ವಕ್ಫ್ ಸಮಿತಿ ಸದಸ್ಯ ಅಜ್ಗರ್ ಪಾಷಾ, ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಫೈಜಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುನಿತಾ ಜಯರಾಮೇಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಮಾಜಿ ಸದಸ್ಯ ಚಿಕ್ಕಸ್ವಾಮಿ, ಶಿವಲಿಂಗಪ್ಪ, ಗಾಗೇನಹಳ್ಳಿ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ರಾಮೇಗೌಡ, ಮುಖಂಡರಾದ, ಎ.ಪಿ ಸ್ವಾಮಿ, ಬಿ.ಎನ್.ಜಯರಾಮ್, ಕುಪ್ಪುಸ್ವಾಮಿ, ಎಸ್ ಜಯರಾಂ, ಉದ್ಯಮಿಗಳಾದ ರಾಜು ಶಿವರಾಜೇಗೌಡ, ಟಿ.ಕೃಷ್ಣ, ಡಾ.ಎಚ್.ವಿ.ಕಾರ್ತಿಕ್, ಅಫ್ರೋಜ್, ಕುಮಾರ್, ಕಾಂಕ್ರೀಟ್ ರಾಜು, ಜಯಲಕ್ಷ್ಮೀ, ಕಲ್ಪನಾ, ನೇತ್ರಾವತಿ, ರೇಖಾಮಣಿ, ರೇಣುಕ, ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.