ಕೆ.ಆರ್.ನಗರ ತಾಲೂಕಿನ ಮಾವತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಮಾನ್ಯ ಜ್ಞಾನ, ರಸಪ್ರಶ್ನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಎಂ.ಎನ್.ಕೃಷ್ಣರಾವ್ ಅವರನ್ನು ಸನ್ಮಾನಿಸಲಾಯಿತು.  
ಮೈಸೂರು

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸ್ಪರ್ಧೆಗಳು ಪೂರಕ

ಪ್ರಮುಖ ಮುಖ್ಯಾಂಶಗಳು

  • children's talents
ಕೆ.ಆರ್.ನಗರ: ಶಾಲಾ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರ ಹಾಕುವುದಕ್ಕೆ ರಸಪ್ರಶ್ನೆ ಹಾಗೂ ವಿಜ್ಞಾನ ಪ್ರತಿಭಾ ಕಾರ್ಯಕ್ರಮಗಳು ಪೂರಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ತಾಲೂಕಿನ ಮಾವತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಮಾವತ್ತೂರಿನ ಮಾಜಿ ಶ್ಯಾನುಭೋಗ ದಿವಂಗತ ಎಂ.ಎಸ್.ನಾಗೇಶರಾವ್ ಮತ್ತು ಗಂಗಮ್ಮ ಸ್ಮಾರಕ ಸಾಮಾನ್ಯ ಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಮಾಜಿ ಶ್ಯಾನುಭೋಗ ದಿವಂಗತ ಎಂ.ಎಸ್.ಕೃಷ್ಣಮೂರ್ತಿ ಹಾಗೂ ಬಿ.ವಿ.ನಾಗಲಕ್ಷ್ಮಮ್ಮ ಅವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಅಂತರ ಪ್ರೌಢಶಾಲಾ ವಿಜ್ಞಾನ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ತಾವು ಓದಿದ ಶಾಲೆಯ ವಿದ್ಯಾರ್ಥಿಗಳಿಗೆ 26 ವರ್ಷದಿಂದಲೂ ತಮ್ಮ ಮಾತಾಪಿತೃಗಳ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಎಂ.ಎನ್.ಕೃಷ್ಣರಾವ್ ಹಾಗೂ ಎಂ.ಕೆ.ಶಿವರಾಮು ಅವರ ಸೇವೆ ಶ್ಲಾಘನೀಯ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ್, ಗ್ರಾಮದ ಆದರ್ಶ ರಾಜೇ ಅರಸ್ ಮಾತನಾಡಿದರು. ಕಾರ್ಯಕ್ರಮದ ವ್ಯವಸ್ಥಾಪಕರಾದ ಎಂ.ಎನ್.ಕೃಷ್ಣರಾವ್ ಹಾಗೂ ಎಂ.ಕೆ.ಶಿವರಾಮ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂ.ಎನ್.ಕೃಷ್ಣರಾವ್ ಅವರಿಗೆ ಜ್ಞಾನ ಸಿಂಧು ಎಂಬ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಇಸಿಒ ದಾಸಪ್ಪ, ಮುಖ್ಯ ಶಿಕ್ಷಕ ಮುರುಳಿಧರ್, ಶಿಕ್ಷಕರಾದ ನಂದೀಶ್ ಕುಮಾರ್, ಭಾಸ್ಕರ್, ಶ್ಯಾನುಭೋಗ ಮನೆತನದ ಶಾರದಮ್ಮ, ಇಂದಿರಾ ರಾವ್ ಪದ್ಮಾಕ್ಷಿ, ಗೀತಾಂಬ, ಗಿರಿಜಾಂಬಾ ಮಂಜುನಾಥ ರಾವ್, ಮನು, ದೀಪ, ಗ್ರಾಮದ ಮುಖಂಡರಾದ ಹೇಮಂತ್, ನವೀನ್, ಧನರಾಜ್, ಸೋಮಶೇಖರ್ ಇನ್ನಿತರರು ಇದ್ದರು.