ಹುಣಸೂರು ತಾಲೂಕು ಎರಡನೇ ಪಕ್ಷಿರಾಜಪುರದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ನಿರ್ವಹಣಾ ಸಮಿತಿ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಕೆ.ವಿ.ಶಾರದಾ ಮಾತನಾಡಿದರು, ಶಿಕ್ಷಕಿ ಕೆ.ಶಾರದಾ, ಸೋನಿ, ರುಕ್ಕು, ಬಬಿತಾ ಇತರರಿದ್ದಾರೆ. 
ಮೈಸೂರು

ಮಕ್ಕಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • Community cooperation
ಹುಣಸೂರು: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಮುದಾಯ ಮತ್ತು ಅಂಗನವಾಡಿ ನಿರ್ವಹಣಾ ಸಮಿತಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ವಿ.ಕೆ.ಶಾರದಾ ಅಭಿಪ್ರಾಯಪಟ್ಟರು.
ತಾಲೂಕಿನ ಎರಡನೇ ಪಕ್ಷಿರಾಜಪುರ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಅಂಗನವಾಡಿ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಪೋಷಣ್ 2.0 ಅಭಿಯಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲಿ ಮಕ್ಕಳ ಆರೋಗ್ಯ, ಪೌಷ್ಠಿಕತೆ ಮತ್ತು ಶಾಲಾ ಪೂರ್ವ ಅಪೌಷ್ಠಿಕತೆಯನ್ನು ತಡೆಯಲು ಅಂಗನವಾಡಿ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ವಾಡಿಕೆಯಂತೆ ಗರ್ಭಿಣಿಯರು, ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ವಿತರಿಸುವ, ಆರೋಗ್ಯ ತಪಾಸಣೆ, ರೋಗನಿರೋಧಕ ಚುಚ್ಚುಮದ್ದು ನೀಡುವ, ಮಾತೃವಂದನೆ ಮತ್ತು ಆರು ವಿಧದ ಸೇವೆಗಳನ್ನು ನೀಡುವುದು, 0-6 ವರ್ಷದ ಮಕ್ಕಳಿಗೆ ಸಮಗ್ರ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವುದು ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ನಿರ್ವಹಣಾ ಸಮಿತಿ ಸಮುದಾಯದಿಂದ ಆಯ್ಕೆ ಮಾಡುವುದರಿಂದ ಸಮುದಾಯದ ಪಾಲ್ಗೊಳ್ಳುವಿಕೆ ಪೋಷಣ್ 2.0 ಅಭಿಯಾನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಮುದಾಯ ಮತ್ತು ಸಮಿತಿ ಪಾತ್ರ ಅತ್ಯಗತ್ವವಾಗಿದ್ದು, ಸಮಿತಿ ಸದಸ್ಯರು ಆಸ್ಥೆ ವಹಿಸಿ ಪಾಲ್ಗೊಂಡಲ್ಲಿ ಯೋಜನೆ ಯಶಸ್ಸು ಸಾಧಿಸುವ ಮೂಲಕ ಸದೃಢ ಭಾರತ ನಿರ್ಮಾಣ ಸಾದ್ಯವೆಂದರು.
ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮಹದೇವಮ್ಮ, ಶಿಕ್ಷಕಿ ಕೆ.ಶಾರದಾ, ಆಶಾ ಕಾರ್ಯಕರ್ತೆ ಬಬಿತಾ, ಶಶಿಕಲಾ, ಸೋನಿ, ರುಕ್ಕು, ನಂದಿನಿ, ಮಹದೇವಿ, ಸುಶೀಲಾ, ಸಂಚಿತಾ ಇತರರು ಇದ್ದರು.