ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ಎಂ.ಕೆ. ಸವಿತಾ ಚಾಮರಾಜ ಕ್ಷೇತ್ರದ ಕೆಲವು ಮತಗಟ್ಟೆ ಮತ್ತು ಎಸ್‌ಐಆರ್ ಫೆಸಿಲಿಟೇಶನ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೆಲವರಿಗೆ ಇಎಫ್ ಅರ್ಜಿ ನಮೂನೆ ನೀಡಿದರು. ಬಿ.ಎನ್.ವೀಣಾ, ಮಂಜುನಾಥ ರೆಡ್ಡಿ, ಪ್ರಸಾದ್, ಅರವಿಂದ, ರವಿಶಂಕರ್ ಇದ್ದರು.
- ಎಲ್ಲ ಇಆರ್‌ಒ ಮತ್ತು ಎಇಆರ್‌ಒಗಳು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸಬೇಕು
- ಗಣತಿ ನಮೂನೆಗಳನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು
ಮೈಸೂರು:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026 ಸಂಬಂಧ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಚಾಮರಾಜ ಕ್ಷೇತ್ರದ ಕೆಲವು ಮತಗಟ್ಟೆ ಮತ್ತು ಎಸ್‌ಐಆರ್ ಫೆಸಿಲಿಟೇಶನ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಿಎಲ್‌ಒ ಮತ್ತು ಪಾಲಿಕೆ ಸಿಬ್ಬಂದಿಯೊಂದಿಗೆ ವಿವಿಧೆಡೆ ಭೇಟಿ ನೀಡಿದ್ದರು. ಕೆಲ ಮನೆಗಳಿಗೆ ತೆರಳಿ ಎಸ್‌ಐಆರ್‌ಗೆ ಇಎಫ್ ಫಾರ್ಮ್‌ಗಳನ್ನು ವಿತರಿಸಿದರು. ಎಸ್‌ಐಆರ್ ಮಹತ್ವ ಹಾಗೂ ಫಾರ್ಮ್‌ಗಳನ್ನು ತುಂಬುವ ಬಗ್ಗೆ ಮಾಹಿತಿ ನೀಡಿ ಸಿಬ್ಬಂದಿಗೆ ಇನ್ನೆರಡು ದಿನಗಳೊಳಗಾಗಿ ಎಸ್‌ಐಆರ್ ಗಣತಿ ನಮೂನೆಗಳನ್ನು ಶೇ.100 ವಿತರಿಸಲು ನಿರ್ದೇಶನ ನೀಡಿದರು.
ಪಾಲಿಕೆಯ ನಾಲ್ಕು ಕ್ಷೇತ್ರಗಳ ಎಲ್ಲ ಇಆರ್‌ಒ ಮತ್ತು ಎಇಆರ್‌ಒಗಳು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಚಾಮರಾಜ, ಕೃಷ್ಣರಾಜ, ನರಸಿಂಹರಾಜ, ಪಾಲಿಕೆ ವ್ಯಾಪ್ತಿಯ ಚಾಮುಂಡೇಶ್ವರಿ ಕ್ಷೇತ್ರದ ಮತಪಟ್ಟಿಯಲ್ಲಿರುವವರು ಎಸ್‌ಐಆರ್ ಕಾರ್ಯದಲ್ಲಿ ಸಂಪೂರ್ಣವಾಗಿ ಭಾಗಿಯಾಗುವಂತೆ ಹಾಗೂ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು. ತಮ್ಮ ವಾರ್ಡ್‌ಗಳಲ್ಲಿ ತೆರೆದಿರುವ ಫೆಸಿಲಿಟೇಶನ್ ಸೆಂಟರ್‌ಗಳಲ್ಲಿ ಅಗತ ನೆರವು ಮತ್ತು ಮಾಹಿತಿ ಪಡೆದು ಸಹಕರಿಸಲು ಮನವಿ ಮಾಡಿದರು.
ಪಾಲಿಕೆ ಹೆಚ್ಚುವರಿ ಆಯುಕ್ತೆ ಬಿ.ಎನ್.ವೀಣಾ, ವಲಯ ಆಯುಕ್ತ ಮಂಜುನಾಥ ರೆಡ್ಡಿ, ಸಹಾಯಕ ಕಂದಾಯಾಧಿಕಾರಿ ಪ್ರಸಾದ್, ಕಂದಾಯ ನಿರೀಕ್ಷಕ ಅರವಿಂದ, ಬಿಎಲ್ಒ ರವಿಶಂಕರ್ ಇತರರು ಇದ್ದರು.