ಮರಿಮಲ್ಲಪ್ಪನವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಗುರಿಕಾರ್ ಮರಿಮಲ್ಲಪ್ಪನವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಭರತ್ ಎಸ್. ಪ್ರಕಾಶ್, ಡಿ. ವಿದ್ಯಾಶ್ರೀ ಹಾಗೂ ಹೀರಾ ಎಂ. ಕಂಬಳಿ ಅವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಪ್ರೊ.ಕೆ.ಎನ್. ಪಂಚಾಕ್ಷರಸ್ವಾಮಿ, ಪ್ರೊ.ಎ.ಎನ್. ಸಂತೋಷ್ ಕುಮಾರ್, ಎಂ.ಪಿ. ನಾಗಮ್ಮ, ಎಚ್.ಬಿ. ಆಶಾ ಇದ್ದರು. 
ಮೈಸೂರು

ಗುರಿಕಾರ್ ಮರಿಮಲ್ಲಪ್ಪನವರ ಸಂಸ್ಮರಣೋತ್ಸವ

ಮೈಸೂರು: ವಿದ್ಯಾರ್ಥಿಗಳು ಸರಳತೆ ಮೈಗೂಡಿಸಿಕೊಂಡು ಪ್ರತಿಯೊಬ್ಬರಿಗೂ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ ಕರೆ ನೀಡಿದರು.
ಮರಿಮಲ್ಲಪ್ಪನವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಗುರಿಕಾರ್ ಮರಿಮಲ್ಲಪ್ಪನವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಇರಬೇಕು. ಎಂದಿಗೂ ನೀವು ಉತ್ಸಾಹವನ್ನು ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಮನುಷ್ಯರಿಗೆ ದೈವಿ ಹಾಗೂ ದಾನವಗುಣ ಇರುತ್ತದೆ. ಸಹನೆ, ಸಹಾಯ ಮಾಡುವ ಗುಣ ದೈವಿ ಗುಣ. ಕೋಪ, ದ್ವೇಷ, ದುರಂಹಕಾರ ದಾನವ ಗುಣ. ನಾವು ಹೆಚ್ಚು ದಾನವ ಗುಣ ಮೈಗೂಡಿಸಿಕೊಂಡರೆ ನಮ್ಮನ್ನು ಯಾರು ಸಹ ಒಳ್ಳೆಯವರು ಎಂದು ಹೇಳುವುದಿಲ್ಲ. ಹೆಚ್ಚು ದೈವಿ ಗುಣ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿ ಅನ್ನುತ್ತಾರೆ. ಅಂತಹ ದೈವಿ ಗುಣವನ್ನು ಗುರಿಕಾರ್ ಮರಿಮಲ್ಲಪ್ಪ ಹೊಂದಿದ್ದರು ಎಂದು ಹೇಳಿದರು.
ಈ ಸಂದರ್ಭ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಭರತ್ ಎಸ್. ಪ್ರಕಾಶ್ (ವಿಜ್ಞಾನ ವಿಭಾಗ), ಡಿ. ವಿದ್ಯಾಶ್ರೀ (ವಾಣಿಜ್ಯ), ಹೀರಾ ಎಂ. ಕಂಬಳಿ (ಕಲಾ) ಅವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮರಿಮಲ್ಲಪ್ಪನವರ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್. ಪಂಚಾಕ್ಷರಸ್ವಾಮಿ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎನ್. ಸಂತೋಷ್ ಕುಮಾರ್, ಕಾಲೇಜು ಪ್ರಾಂಶುಪಾಲೆ ಎಚ್.ಬಿ. ಆಶಾ ಇದ್ದರು.