ಮೈಸೂರು ನಗರದ ಜಯಲಕ್ಷ್ಮಿಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಾಣ್ಯ, ನೋಟುಗಳು ಮತ್ತು ಅಂಚೆ ಚೀಟಿಗಳ ಪ್ರದರ್ಶ ನಡೆಯಿತು. ಡಾ.ಡಿ.ಎಸ್. ಪ್ರತಿಮಾ, ಡಾ.ಟಿ. ವಿಜಯಲಕ್ಷ್ಮೀ, ಡಾ.ಬಿ.ಆರ್. ಜಯಕುಮಾರಿ, ಡಾ.ಎಸ್.ಆರ್. ರಮೇಶ್, ಡಾ.ಎಚ್. ಶ್ರೀಧರ್, ಪಿ.ಕೆ. ಕೇಶವಮೂರ್ತಿ ಹಾಗೂ ಇತರರು ಇದ್ದರು. 
ಮೈಸೂರು

ಮೈಸೂರಿನ ಮಹಾಜನ ಕಾಲೇಜಿನಲ್ಲಿ ನಾಣ್ಯ, ನೋಟುಗಳು ಪ್ರದರ್ಶನ

ಮೈಸೂರು:

ನಗರದ ಜಯಲಕ್ಷ್ಮಿಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಹಾಗೂ ಐಕ್ಯೂಎಸಿ ವಿಭಾಗ ವತಿಯಿಂದ ಶುಕ್ರವಾರ ನಾಣ್ಯ, ನೋಟುಗಳು ಮತ್ತು ಅಂಚೆ ಚೀಟಿಗಳ ಪ್ರದರ್ಶನ ನಡೆಯಿತು.

ಗ್ರೀಕ್, ರೋಮನ್‌ರ ಕಾಲದ ನಾಣ್ಯಗಳು, ಕುಷಾಣರು, ಗುಪ್ತ, ಶಾತವಾಹನ, ಕದಂಬ, ಚೋಳ, ಪಾಂಡ್ಯ, ಮೊಘಲ್ ಸಾಮ್ರಾಜ್ಯ, ವಿಜಯನಗರ ಸಾಮ್ರಾಜ್ಯ, ಮೈಸೂರು, ಬಿಜಾಪುರ, ತಿರುವಾಂಕೂರು, ಹೈದರಾಬಾದ್ ಮುಂತಾದ ರಾಜಮನೆತನದವರು ಹೊರ ತಂದಿರುವ ವಿಶೇಷ ನಾಣ್ಯಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ಸ್ವಾತಂತ್ರೃ ಪೂರ್ವದ ಬ್ರಿಟಿಷರ, ಪೋರ್ಚಗೀಸರ ನಾಣ್ಯಗಳು, ವಿವಿಧ ಸ್ಮರಣಾರ್ಥ ಬಿಡುಗಡೆಯಾದ ದೇಶದ 150 ರೂ., 100 ರೂ., 50 ರೂ., 20 ರೂ. ಹಾಗೂ 10 ರೂ. ನಾಣ್ಯಗಳು. ನೂರಾರು ದೇಶ-ವಿದೇಶಗಳ ವೈವಿಧ್ಯಮಯ ನಾಣ್ಯ ಮತ್ತು ನೋಟುಗಳು ಪ್ರದರ್ಶನಕ್ಕೆ ಇಡಲಾಗಿತ್ತು. ಚಿನ್ನ, ಬೆಳ್ಳಿ, ತಾಮ್ರ, ಸೀಸ, ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳ ಸಂಗ್ರಹವೂ ಇತ್ತು.
ಪ್ರದರ್ಶನಕ್ಕೆ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ.ಡಿ.ಎಸ್. ಪ್ರತಿಮಾ ಚಾಲನೆ ನೀಡಿದರು. ಮಹಾಜನ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮೀ, ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್. ರಮೇಶ್, ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ್, ನಾಣ್ಯ ಸಂಗ್ರಹಕಾರ ಪಿ.ಕೆ. ಕೇಶವಮೂರ್ತಿ ಹಾಗೂ ಇತರರು ಇದ್ದರು.