ಸಿದ್ದರಾಮಯ್ಯ 
ಮೈಸೂರು

ನಗರದಲ್ಲಿ ಜನರ ಅಹವಾಲು ಸ್ವೀಕರಿಸಿದ ಸಿಎಂ

ಮೈಸೂರು: ನಗರದಲ್ಲಿ ಭಾನುವಾರ ರಾತ್ರಿ ತಂಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ತಮ್ಮ ನಿವಾಸದ ಬಳಿ ನೆರೆದಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಜಿಲ್ಲೆಯ ಮೂಲೆ, ಮೂಲೆಗಳಿಂದ ಆಗಮಿಸಿದ್ದ ನೂರಾರು ಜನರು ತಮ್ಮ ವೈಯಕ್ತಿಕ ಸಮಸ್ಯೆ, ಉದ್ಯೋಗ, ಶಿಕ್ಷಣ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಎಲ್ಲರ ಮನವಿ ಆಲಿಸಿದ ಸಿಎಂ ಸಿದ್ದರಾಮಯ್ಯ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಮನೆಗೆ ಬರುವಂತೆ ಸಿಎಂಗೆ ಆಹ್ವಾನ: ಈ ವೇಳೆ ಸಿದ್ದರಾಮನಹುಂಡಿ ಗ್ರಾಮದ ಪರಿಚಯಸ್ಥನೊಬ್ಬ ಮುಖ್ಯಮಂತ್ರಿಗಳನ್ನು ಮನೆಗೆ ಬರುವಂತೆ ಆಹ್ವಾನಿಸಿದರು. ತಕ್ಷಣ ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನೀನು ಯಾವಾಗ ಕರೆಯುತ್ತಿಯೋ, ಆಗ ನಾನು ಬರುತ್ತೇನೆ. ಊಟ ಮಾಡಿಸು ಬರುತ್ತೇನೆ’ ಎಂದರು. ಇದೇ ವೇಳೆ ಅಲ್ಲೇ ಇದ್ದ ಪೈಲ್ವಾನ್ ಒಬ್ಬರನ್ನು ತಮ್ಮ ಬಳಿ ಕರೆದು 500 ರೂ. ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಚಿವ ಕೆ.ವೆಂಕಟೇಶ್ ಇತರರಿದ್ದರು.