ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸೌಧವನ್ನು ಮಾರಾಟ ಮಾಡುತ್ತಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಅವರು ನಾಲ್ಕು ಮಾತನಾಡಿ ಸಂತೋಷ ಪಟ್ಟುಕೊಳ್ಳಲಿ, ನಾನು ಏತಕ್ಕೆ ಅವರ ನಾಲಿಗೆಯನ್ನು ಕಂಟ್ರೋಲ್ ಮಾಡಲು ಹೋಗಲಿ. ಏನು ಬೇಕಾದರೂ ಮಾತನಾಡಲಿ, ಎಷ್ಟು ಬೇಕಾದರೂ ಮಾತನಾಡಲಿ. ಅಸೂಯೆಗೆ ಮದ್ದು ಇಲ್ಲ. ಅವರಲ್ಲಿ ಅಸೂಯೆ ಎದ್ದು ಕಾಣುತ್ತಿದೆ. ನನಗೆ ಅವರ ಚರಿತ್ರೆ ತೆಗೆಯಲು ಇಷ್ಟ ಇಲ್ಲ, ಟೀಕೆಗಳು ಸಾಯುತ್ತವೆ, ನನ್ನ ಕೆಲಸಗಳು ಉಳಿಯುತ್ತವೆ ಎಂದು ತಿರುಗೇಟು ನೀಡಿದರು.
ಬಿಜೆಪಿಯಿಂದ ರಾಜಕೀಯ:
ಸಚಿವ ನಾಗೇಂದ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿಯವರಿಗೆ ರಾಜ್ಯದ ಬರಪರಿಸ್ಥಿತಿ, ಜನರ ಪರಿಸ್ಥಿತಿ ಮುಖ್ಯವಲ್ಲ, ಅವರಿಗೆ ರಾಜಕೀಯ ಮುಖ್ಯ. ಕಾವೇರಿ ಸಮಸ್ಯೆ, ಬರ ಸಮಸ್ಯೆ ಕುರಿತು ಅವರು ಚರ್ಚೆ ನಡೆಸುತ್ತಿಲ್ಲ. ನಿರಪಾರಾಧಿ ನಾಗೇಂದ್ರ ಪಕ್ಷದ ಹಿತ ಕಾಪಾಡುವುದಕೋಸ್ಕರ ರಾಜೀನಾಮೆ ನೀಡಿದ್ದಾರೆ, ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದೇನೆ. ನಾಗೇಂದ್ರ ರಾಜೀನಾಮೆ ನೀಡಿದ ನಂತರವೂ ಬಿಜೆಪಿ ಪಾದಯಾತ್ರೆ ಮಾಡಲು ಮುಂದಾಗಿದೆ. ನಾನು ಮುಖ್ಯಮಂತ್ರಿಯಾಗಿರುವುದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕೋಸ್ಕರ ಹೋರಾಟ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು.
ಹನೂರು ಪ್ರಕರಣ ಸಿಒಡಿಗೆ:
ಹನೂರು ಹತ್ಯೆ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಿದ್ದೇವೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗು ವುದು ಎಂದು. ಆರೋಪಿಗಳಿಗೆ ಹತ್ತಿರದಿಂದ ಗುಂಡು ಹಾರಿಸಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ಸಿಒಡಿ ತನಿಖೆ ನಡೆಸಲಿದೆ ಎಂದು ಹೇಳಿದರು.