ವಿಶ್ವ ಆರೋಗ್ಯ ದಿನದ ಪ್ರಯುಕ್ತ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಸಹಾಯಕ ಪ್ರಾಧ್ಯಾಪಕಿ ಡಾ. ನಿವೇದಿತಾ ಪ್ರಕಾಶ್ ಉದ್ಘಾಟಿಸಿದರು. ಡಾ. ರೇಚಣ್ಣ, ರಶ್ಮಿ, ಎನ್. ನಾಗಲಾಂಬಿಕೆ ಇದ್ದರು.
ಮೈಸೂರು: ರುಚಿಯಾದ ತಿಂಡಿಗಿಂತ ಶುಚಿಯಾದ ಆಹಾರ ಮುಖ್ಯ ಎಂದು ಸಹಾಯಕ ಪ್ರಾಧ್ಯಾಪಕಿ ಡಾ. ನಿವೇದಿತಾ ಪ್ರಕಾಶ್ ಹೇಳಿದರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನದ ಪ್ರಯುಕ್ತ ಬುಧವಾರ ಯುವ ರೆಡ್ ಕ್ರಾಸ್ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಜಂಕ್ ಫುಡ್‌ಗಳ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗಲಿದ್ದು, ದೇಹದ ಆರೋಗ್ಯಕ್ಕೆ ಪೂರಕವಾದ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದರು. ಪ್ರಾಂಶುಪಾಲ ಡಾ. ರೇಚಣ್ಣ, ದೈಹಿಕ ನಿರ್ದೇಶಕಿ ರಶ್ಮಿ, ಯುವ ರೆಡ್ ಕ್ರಾಸ್‌ಸಂಸ್ಥೆಯ ಸಂಚಾಲಕಿ ಎನ್. ನಾಗಲಾಂಬಿಕೆ ಇದ್ದರು.