ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ತಲೆಗೆ ಟೋಪಿ ಹಾಗೂ ಟೀ, ಬನ್, ಬಾಳೆಹಣ್ಣು ನೀಡುವ ಮೂಲಕ ಪೌರಕಾರ್ಮಿಕರನ್ನು ಸತ್ಕರಿಸಲಾಯಿತು. ಸಿ.ನಾರಾಯಣಗೌಡ, ಬಸವರಾಜ್ ಬಸಪ್ಪ, ಅಪೂರ್ವ ಸುರೇಶ್, ಸುರೇಶ್, ಜಗದೀಶ್, ಜಯರಾಮ್, ಶಿವಪ್ರಸಾದ್ ಇತರರಿದ್ದರು.
- ನಗರದ ಸ್ವಚ್ಛಗೊಳಿಸಿ ನಮಗೆ ಸುಂದರ ಪರಿಸರವನ್ನು ನೀಡುವ ನಿಜವಾದ ಪರಿಸರವಾದಿಗಳು ಪೌರಕಾರ್ಮಿಕರು
- ಒಂದು ದಿನ ಸ್ವಚ್ಛಗೊಳಿಸುವುದನ್ನು ನಿಲ್ಲಿಸಿದರೆ ಇಡೀ ಪರಿಸರವೇ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ
ಮೈಸೂರು:ಅಪೂರ್ವ ಸ್ನೇಹ ಬಳಗ ಹಾಗೂ ರಂಗರಾವ್ ಆ್ಯಂಡ್ ಸನ್ಸ್‌ಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ತಲೆಗೆ ಟೋಪಿ ಹಾಗೂ ಟೀ, ಬನ್, ಬಾಳೆಹಣ್ಣು ನೀಡುವ ಮೂಲಕ ಪೌರಕಾರ್ಮಿಕರನ್ನು ಸತ್ಕರಿಸಲಾಯಿತು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ನಗರದ ಕಸ ತೆಗೆದು ಪರಿಸರವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರ ಸೇವೆ ಸ್ಮರಣೀಯ. ಪೌರಕಾರ್ಮಿಕರು ಈ ದೇಶದ ನಿಜವಾದ ಸೇವಕರು. ಮೈಸೂರು ನಗರದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.
ನಾವೆಲ್ಲಾ ಏಳುವ ಮುನ್ನವೇ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ನಮಗೆ ಸುಂದರ ಪರಿಸರವನ್ನು ನೀಡುವ ನಿಜವಾದ ಪರಿಸರವಾದಿಗಳು ಎಂದರೆ ಅದು ಪೌರಕಾರ್ಮಿಕರು. ಅವರು ಒಂದು ದಿನ ಸ್ವಚ್ಛಗೊಳಿಸುವುದನ್ನು ನಿಲ್ಲಿಸಿದರೆ ಇಡೀ ಪರಿಸರವೇ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ. ಹಾಗಾಗಿ ಪೌರಕಾರ್ಮಿಕ ಕಾರ್ಯ ಮಹತ್ವದ್ದು ಎಂದು ಹೇಳಿದರು.
ಪೌರ ಕಾರ್ಮಿಕರು ಅಂದರೆ ಸಮಾಜದ ಅತ್ಯಂತ ಕೆಳ ಮಟ್ಟದ ಸಮುದಾಯ ಎಂಬ ಮಾತು ಇತ್ತು. ಆದರೆ ಈಗ ಆ ಮಾತು ಇಲ್ಲ. ಒಂದು ಅತ್ಯುತ್ತಮ ಜೀವನಮಟ್ಟ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸುರೇಶ್, ರಂಗ ರಾವ್ ಆ್ಯಂಡ್ ಸನ್ಸ್ ಸುರೇಶ್, ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ಉದ್ಯಮಿ ಜಯರಾಮ್, ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ದೂರ ರಾಜಣ್ಣ, ಆನಂದ, ಮೈಲಾ ವಿಜಯ್ ಕುಮಾರ್, ಜತ್ತಿ ಪ್ರಸಾದ್, ಶಿವಲಿಂಗ ಸ್ವಾಮಿ ಇದ್ದರು.