ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ತಿ.ನರಸೀಪುರ ಪಟ್ಟಣದ ಕೈಸ್ಟ್ ಪ್ರೈಮರಿ ಹಾಗೂ ಸೆಂಟ್ ಜೋಸೆಫ್ ರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿ ವಿಜಯ ಸಾಧಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಪಡೆದರು.
ತಿ.ನರಸೀಪುರ: ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಆಯೋಜಿಸಿದ್ದ 20ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪಟ್ಟಣದ ಕ್ರೈಸ್ಟ್ ಪ್ರೈಮರಿ ಹಾಗೂ ಸೇಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಚಿನ್ನದ ಪದಕ, ದ್ವಿತೀಯ ಸ್ಥಾನದಲ್ಲಿ ಬೆಳ್ಳಿಯ ಪದಕ ಹಾಗೂ ತೃತೀಯ ಸ್ಥಾನದಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಕರಾಟೆ ಕಥಾ (ಆಕ್ಷನ್) ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಜೆ.ಮಾನ್ವಿತ, ಆರ್. ಜಶ್ವಂತ್, ಹರ್ಷಾನಂದ, ಎಂ.ಬಿ.ಶಶಾಂಕ್, ಎನ್.ಲಿಖಿತ್ ಚಂದ್ರು, ಎನ್.ಶಿವಕುಮಾರ್, ದ್ವಿತೀಯ ಸ್ಥಾನದಲ್ಲಿ ಎಸ್.ಮನೋಜ್ ಕುಮಾರ್, ಎಸ್.ಯಶ್ವಂತ್, ಆರ್.ಲಿಖಿತ್, ಸಿರೀಷಾ ಹಾಗೂ ತೃತೀಯ ಸ್ಥಾನದಲ್ಲಿ ಎ.ಯಶಸ್, ಆರ್ಯನ್ ನಿಹಾಲ್, ಎಂ.ಬಿ.ಮನ್ವಿತ್, ವಿ.ಚೇತನ್, ಜಸ್ವಂತ್ ಗೌಡ, ಬಿ.ಎಂ. ಚೈತನ್ಯ, ಗೌತಮಿ, ಮೋಹಿತ್ ಪಿ.ನಾಯಕ್, ಎಂ.ಮನ್ವಿತ್ ಮತ್ತು ಬಿ.ಧೃವಿತ್ ಗೆದ್ದು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದುಕೊಂಡರು.
ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಜೆ.ಮಾನ್ವಿತ, ಎಂ.ಬಿ.ಶಶಾಂಕ್, ಎಂ.ಬಿ.ಮನೋಜ್ ಕುಮಾರ್, ಎನ್. ಲಿಖಿತ್ ಚಂದ್ರು, ದ್ವಿತೀಯ ಸ್ಥಾನದಲ್ಲಿ ಆರ್. ಜಶ್ವಂತ್, ವಿ.ಚೇತಸ್ ಹಾಗೂ ತೃತೀಯ ಸ್ಥಾನದಲ್ಲಿ ಆರ್.ಲಿಖಿತ್, ಎಂ.ಬಿ.ಮನ್ವಿತ್ ಮತ್ತು ಎಸ್.ಯಶ್ವಂತ್ ಗೆಲ್ಲುವ ಮೂಲಕ ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು. ಸಾಧನೆ ಮಾಡಿದ ಈ ವಿದ್ಯಾರ್ಥಿಗಳಿಗೆ ಕರಾಟೆ ಮಾಸ್ಟರ್ ಯಡದೊರೆ ಮಹಾದೇವಸ್ವಾಮಿ ಅವರು ತರಬೇತಿಯನ್ನು ನೀಡಿದ್ದರು.