ಹುಣಸೂರು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಅರ್ಜಿದಾರರಿಂದ ಮಾಹಿತಿ ಪಡೆದರು. ತಹಸೀಲ್ದಾರ್ ಜೆ.ಮಂಜುನಾಥ್, ಸಮಿತಿ ಸದಸ್ಯರಾದ ಕುಮಾರ್ ಇದ್ದರು. 
ಮೈಸೂರು

ದಾಖಲೆ ಪರಿಶೀಲಿಸಿ ಕಾನೂನು ಕ್ರಮ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕಚೇರಿ ಸಭಾಂಗಣ
  • ಅಕ್ರಮ ಸಕ್ರಮ ಸಮಿತಿ ಸಭೆ
ಹುಣಸೂರು: ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ 15 ರೈತರ ಅರ್ಜಿಗಳನ್ನು ಅನುಮೋದಿಸಲಾಯಿತು.
45 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕರಣಗಳಿಗೆ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಜಮೀನಿಗೆ ಸಾಗುವಳಿ ನೀಡುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಅರ್ಜಿದಾರರಿಗೆ ದಾಖಲಾತಿ ಕೋರುವ ಇತರ ಅಗತ್ಯ ದಾಖಲೆಗೆಳನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರೀಶ್‌ಗೌಡ ಹೇಳಿದರು.
ಸಾಗುವಳಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಸರ್ಕಾರ ನಿಗದಿಪಡಿಸಿದ ಶುಲ್ಕ ಹೊರತು ಪಡಿಸಿ ಹೆಚ್ಚುವರಿ ಹಣ ನೀಡಬಾರದು. ಒಂದೊಮ್ಮೆ ನೀವು ಲಂಚ ನೀಡಿದರೆ ನನ್ನ ಪರಿಶ್ರಮಕ್ಕೆ ಅವಮಾನ ಮಾಡಿದಂತೆ ಎಂದ ಅವರು, ಯಾವುದೇ ಅಧಿಕಾರಿಗಳು, ಸಿಬ್ಬಂದಿ ರೈತರಿಗೆ ಹಣಕ್ಕೆ ಪೀಡಿಸಿದರೆ ಅಥವಾ ಮಧ್ಯವರ್ತಿಗಳನ್ನು ಬಳಸಿ ಹಣ ಪಡೆದುಕೊಂಡಿರುವುದು ಗಮನಕ್ಕೆ ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಎದುರಿಸಬೇಕಾದೀತೆಂದು ಎಚ್ಚರಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್ ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಲತಾ ಶ್ರೀಕಂಠಪ್ಪ ಶಿರೇಸ್ತದಾರ್ ಶ್ರೀಪಾದ್ ನಲವತ್‌ವಾಡ್ಕರ್, ಕಂದಾಯ ನಿರೀಕ್ಷಕ ನಂದೀಶ್, ಶ್ರೀಧರ್, ಹೇಮಂತ್, ಮಂಜುನಾಥ್ ಇತರರಿದ್ದರು.