ದರ್ಶನ್  
ಮೈಸೂರು

ಗೌಡರು ಉನ್ನತ ಸ್ಥಾನಕ್ಕೇರಲು ಚನ್ನಮ್ಮರ ಪಾತ್ರ ಅಪಾರ

ನಂಜನಗೂಡು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾರತದಲ್ಲಿ ಅಪ್ರತಿಮ ರಾಜಕಾರಣಿ. ಅವರ ಯಶಸ್ಸಿಗೆ ಅವರ ಧರ್ಮಪತ್ನಿ ಚೆನ್ನಮ್ಮನವರೇ ಮುಖ್ಯ ಕಾರಣ. 6 ಮಕ್ಕಳನ್ನು ಪೋಷಿಸಿ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು, ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದರಲ್ಲಿ ಚನ್ನಮ್ಮನವರ ಪಾತ್ರ ಬಹಳ ಇದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದ್ದಾರೆ.
ರಾಜಕೀಯವಾಗಿ ದೇವೇಗೌಡರು ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಪ್ರವಾಸದಲ್ಲಿ ಇರುವ ಸಂದರ್ಭಗಳಲ್ಲಿ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ತೆಗೆದುಕೊಂಡು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರು ಅಪರ ದೈವ ಭಕ್ತರು. ಸದಾಕಾಲ ದೇವಾಲಯದಲ್ಲಿ ಸಮಯ ಕಳೆಯುತ್ತಿದ್ದರು.
ಅವರ ಈ ಸಂಸ್ಕೃತಿ ಅವರ ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಬಂದಿದೆ. ಅವರ ಕುಟುಂಬದವರೆಲ್ಲರೂ ಅಪಾರ ದೈವಭಕ್ತರು. ಅವರ ಅಗಲಿಕೆ ಗೌಡರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ದರ್ಶನ್