ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಮಲಿಗಮ್ಮ ಆಯ್ಕೆಯಾದರು. 
ಮೈಸೂರು

ಕಸುವಿನಹಳ್ಳಿ ಡೇರಿಗೆ ಚಂದ್ರಶೇಖರ್ ಅಧ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಉಪಾಧ್ಯಕ್ಷರಾಗಿ ಮಲ್ಲಿಗಮ್ಮ ಆಯ್ಕೆ
ನಂಜನಗೂಡು: ತಾಲೂಕಿನ ಕಸುವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಮಲಿಗಮ್ಮ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಮತ್ತು ಸುರೇಶ್ ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ ಚಂದ್ರಶೇಖರ್ 7 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದರು. ಪ್ರತಿಸ್ಪರ್ಧಿ ಸುರೇಶ್ 5 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಗಮ್ಮ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾದರು. ಜ.26ರಂದು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಂತಿಮವಾಗಿ ಚುನಾವಣೆ ಅಧಿಕಾರಿ ನಾರಾಯಣಸ್ವಾಮಿ ಸ್ಥಾನಗಳನ್ನು ಘೋಷಣೆ ಮಾಡಿದರು.
ವಿಸ್ತರಣಾಧಿಕಾರಿ ಶಿವಕುಮಾರ್ ಕೋಚನಹಳ್ಳಿ, ಹಾಲು ಪರೀಕ್ಷಕ ಗುರುಸ್ವಾಮಿ, ಸಹಾಯಕ ಶಿವಲಿಂಗಪ್ಪ, ನಿರ್ದೇಶಕರಾದ ಮಲ್ಲಿಕಾರ್ಜುನ, ಸುರೇಶ್, ಮಹದೇವಸ್ವಾಮಿ, ಮಹದೇವಪ್ಪ, ಸಿದ್ದಪ್ಪ ಸುಶೀಲ, ಪುಟ್ಟವೀರಮ್ಮ, ಮಹದೇವ ನಾಯಕ, ಗ್ರಾಮದ ಮುಖಂಡರಾದ ಕೆ.ಎಂ. ಶಿವಪ್ಪ, ಚಿನ್ನಸ್ವಾಮಿ ಕೆ.ಎನ್.ಮಲ್ಲೇಶ್, ಗೌಡಕೆ ನಿಜಲಿಂಗಪ್ಪ, ನಾಗನಾಯಕ, ಗುರು, ರಾಜೇಂದ್ರ ಪ್ರಸಾದ್, ನಿಂಗನಾಯಕ, ನಾಗನಾಯಕ, ಚಂದ್ರನಾಯಕ, ಮಹದೇವ ನಾಯಕ, ಮಹಾದೇವಪ್ಪ, ಜಗದೀಶ್, ರಾಜು, ಕುಮಾರ, ಶಿವಪ್ಪ, ಸಿದ್ದರಾಜು ಹಾಜರಿದ್ದರು.