ಎಚ್.ಡಿ.ಕೋಟೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಕುಮಾರ್, ಉಪಾಧ್ಯಕ್ಷರಾಗಿ ರೂಪಾ ಪ್ರಮೋದ್, ಜೂಲಿಯಟ್ ವಿಲ್ಮಾ, ಕಾರ್ಯದರ್ಶಿಯಾಗಿ ಪ್ರಕಾಶ್, ಖಜಾಂಚಿಯಾಗಿ ಯಶವಂತ್ ಆಯ್ಕೆಯಾದರು. 
ಮೈಸೂರು

ಅಧ್ಯಕ್ಷರಾಗಿ ಚಂದ್ರಕುಮಾರ್ ಆಯ್ಕೆ

ನಾಗೇಶ ಎಸ್
ಎಚ್.ಡಿ.ಕೋಟೆ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಚಂದ್ರಕುಮಾರ್, ಉಪಾಧ್ಯಕ್ಷರಾಗಿ ರೂಪಾ ಪ್ರಮೋದ್, ಜೂಲಿಯಟ್ ವಿಲ್ಮಾ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31ನೇ ಅವಧಿಯ ಆಡಳಿತ ಮಂಡಳಿಗೆ ಕಾರ್ಯದರ್ಶಿಯಾಗಿ ಪ್ರಕಾಶ್, ಖಜಾಂಚಿಯಾಗಿ ಯಶವಂತ್, ನಿರ್ದೇಶಕರಾಗಿ ಸ್ವಾಮಿ ಗೌಡ, ರಘುನಾಥ್ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ರಷೀದ್ ಬೇಗ್ ಕಾರ್ಯನಿರ್ವಹಿಸಿದರು. ಇದೇ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯನ್ನು ಶಿಕ್ಷಕರು ಅಭಿನಂದಿಸಿದರು.