ತಿ.ನರಸೀಪುರದ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಚೈತನ್ಯ ಚಾರಿಟಬಲ್ ಟ್ರಸ್ಟ್‌ನ ಬೆಳ್ಳಿ ಮಹೋತ್ಸವವನ್ನು ಮಂಡ್ಯ ಬಿಷಪ್ ಸಭಾಸ್ಟೀಯನ್ ಎದೆಯನಾಥರನ್ ಉದ್ಘಾಟಿಸಿದರು. ಮರೀನಾ ಕೊಲ್ಲರಾತ್, ಫಾ.ಜೋಸ್ ಮುರಿಕಾನ್, ಫಾ.ಬೆನ್ನಿ ಥಾಮಸ್, ಭಾಗ್ಯಾ ಶಿವಕುಮಾರ್ ಇತರರು ಇದ್ದರು.
ತಿ.ನರಸೀಪುರ: ಪಟ್ಟಣದ ಹಳೇ ತಿರುಮಕೂಡಲು ಬಳಿಯಿರುವ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಸಾಮಾಜಿಕ ಸೇವಾ ಸಂಸ್ಥೆ ವ್ಯಾಸರಾಜಪುರ ಗ್ರಾಮದ ಚೈತನ್ಯ ಚಾರಿಟಬಲ್ ಟ್ರಸ್ಟ್‌ನ ಬೆಳ್ಳಿ ಮಹೋತ್ಸವ ಆಯೋಜಿಸಲಾಗಿತ್ತು.
ಕಳೆದ ಎರಡೂವರೆ ದಶಕಗಳಿಂದ ತಾಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ಸಾಮಾಜಿಕ ಸೇವಾ ಚಟುವಟಿಕೆ ನಡೆಸುತ್ತಿರುವ ಚೈತನ್ಯ ಚಾರಿಟಬಲ್ ಟ್ರಸ್ಟ್‌ಗೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿದ ಮಂಡ್ಯ ಬಿಷಪ್ ಸಭಾಸ್ಟೀಯನ್ ಎದೆಯನಾಥರನ್ ಮಾತನಾಡಿ, ಸಿಸ್ಟರ್ ಜೈನ್ ಮ್ಯಾಥ್ಯೂ , ಸಿಸ್ಟರ ರೂಬಿ ಅವರಿಂದ ವ್ಯಾಸರಾಜಪುರದಲ್ಲಿ ಪ್ರಾರಂಭವಾದ ಚೈತನ್ಯಾ ಚಾರಿಟಬಲ್ ಟ್ರಸ್ಟ್ ಹಳ್ಳಿಗಾಡಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣಕ್ಕಾಗಿ ತರಬೇತಿಗಳನ್ನು ಕೈಗೊಂಡು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಸತತವಾಗಿ ಶ್ರಮಿಸುತ್ತಾ ಸಂಸ್ಥೆ 25 ವರ್ಷಗಳನ್ನು ಪೂರ್ಣಗೊಳಿಸಿರುವುದು ಸಂತಸವಾಗಿದೆ. ಹೀಗೆ ಮುಂದಿನ ದಿನಗಳಲ್ಲಿ ಉತ್ತಮವಾದ ಕಾರ್ಯಗಳನ್ನು ಮುಂದುವರೆಯಲಿ ಎಂದು ತಿಳಿಸಿದರು.
ಮರೀನಾ ಕೊಲ್ಲರಾತ್, ಫಾ.ಜೋಸ್ ಮುರಿಕಾನ್, ಪ್ರೀಲೆಟ್, ನೋರ್ಬರ್ಟೈನ್ ಫಾ.ಮಾನಂದವಾಡಿ, ಸಂತ ನೋರ್ಬರ್ಟ್ ಶಾಲೆ ವ್ಯವಸ್ಥಾಪಕ ಫಾ.ಬೆನ್ನಿ ಥಾಮಸ್, ಪ್ಯಾರಿಸ್ ಪ್ರೀಸ್ಟ್ ಇನ್ಫೆಂಟ್ ಜೀಸಸ್ ಚರ್ಚ್‌ನ ಫಾ. ಆಂತೋನಿ ರಾಜ್, ಪಿರಿಯಾಪಟ್ಟಣ ಸಿಸಿಟಿ ಸಂಸ್ಥಾಪಕ ನಿರ್ದೇಶಕಿ ಜೈನ್ ಮ್ಯಾಥ್ಯೂ, ಮೈಸೂರು ಸುಮನ ಸಂಸ್ಥೆಯ ಅಲಿನ್ಸ್ ಥಾಮಸ್, ಕಂದಾಯ ಅಧಿಕಾರಿ ನಸ್ರುಲ್ಲಾ ಷರೀಫ್, ಗ್ರಾಮಲೆಕ್ಕಿಗ ಆರ್.ಶ್ರುತಿ, ಮರಿಯಾ ಜೆಬ್, ಭಾಗ್ಯಾ ಶಿವಕುಮಾರ್, ವೈ.ರಾಮಚಂದ್ರ, ಚೈತನ್ಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿ ಜುಬಿ ಜಾನ್ , ಸಂಯೋಜಕಿ ಅನು ಜಾರ್ಜ್ , ಸಹಾಯಕ ಸಂಯೋಜಕಿ ಅನು ವರ್ಗಿಸ್ ಹಾಗೂ ವ್ಯಾಸರಾಜಪುರ ಗ್ರಾಮಸ್ಥರು ಇದ್ದರು.