ವಾಚ್ಯವಾಗಿ ನಿಂದಿಸಿ ಹಲ್ಲೆ 
ಮೈಸೂರು

ಸೆಸ್ಕ್ ನೌಕರನ ಮೇಲೆ ಹಲ್ಲೆ

ಪ್ರಮುಖ ಮುಖ್ಯಾಂಶಗಳು

  • ಅವಾಚ್ಯವಾಗಿ ನಿಂದಿಸಿ ಹಲ್ಲೆ
  • ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲು
ಮೈಸೂರು: ವಿದ್ಯುತ್ ಬಾಕಿ ಬಿಲ್ ವಸೂಲಿಗೆ ತೆರಳಿದ್ದ ಸೆಸ್ಕ್ ನೌಕರನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. 
ಕಲ್ಯಾಣಗಿರಿಯ ನಿವಾಸಿ ರಶೀದ್ ವಿರುದ್ಧ ಸೆಸ್ಕ್‌ನ ಶಾಂತಿ ನಗರದ ಶಾಖೆಯ ಕಿರಿಯ ಇಂಜಿನಿಯರ್ ಎಂ.ಎಸ್.ಶಿವಸ್ವಾಮಿ ದೂರು ನೀಡಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಿಯ ಪವರ್‌ಮನ್ ಮಂಜುನಾಥ್ ಹಾಗೂ ತಾತ್ಕಾಲಿಕ ಗ್ಯಾಂಗ್‌ಮನ್ ನಂದೀಶ್ ಬಾಕಿ ವಸೂಲಾತಿಗೆ ತೆರಳಿದ್ದರು. ಆಗ ಮಂಜುನಾಥ್ ಅವರು ವಿದ್ಯುತ್ ಬಾಕಿ 4,509 ರೂ. ಪಾವತಿಸುವಂತೆ ರಶೀದ್ ಅವರಿಗೆ ಸೂಚಿಸಿದ್ದಾರೆ.
 ಇದರಿಂದ ಸಿಟ್ಟಿಗೆದ್ದ ಅವರು, ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಮುಂದಾದ ನಂದೀಶ್ ಮೇಲೂ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.