ತಾಲೂಕಿನ ಹಂಚ್ಯಾ ಗ್ರಾಮದಲ್ಲಿ 77 ನೇ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಚ್.ಡಿ.ಚೆನ್ನಯ್ಯ, ರಾಮಣ್ಣ, ಟಿ.ಕುಮಾರ್, ಆರ್. ಪರಶಿವಮೂರ್ತಿ, ಎಂ.ಶ್ವೇತ, ಶಿವಮಾದು, ಎಂ.ಕೆ.ರೇಖಾ, ಗೀತಾ, ಸುಧಾ, ಗಣೇಶ್ ಇತರರಿದ್ದರು.
ಮೈಸೂರು: ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ವಿವಿಧ ದೇಶ ಭಕ್ತಿ ಗೀತೆಗಳ ಗಾಯನ, ನೃತ್ಯ ಹಾಗೂ ವೇಷಭೂಷಣಗಳ ಸಂಭ್ರಮದೊಂದಿಗೆ 77 ನೇ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಆವರಣದಲ್ಲಿ ಧ್ಯಜಾರೋಣ, ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಕಾಂಗ್ರೆಸ್ ಗ್ಯಾರಂಟಿ ತಾಲೂಕು ಪ್ರಾಧಿಕಾರದ ಸದಸ್ಯ ಎಚ್.ಡಿ.ಚೆನ್ನಯ್ಯ ಮಾತನಾಡಿ, ಸಂವಿಧಾನವನ್ನು ಒಪ್ಪು ಅನುಸರಿಸಿದ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಬೇಕಿದೆ. ಸಂವಿಧಾನದ ಮಹತ್ವವನ್ನು ಮಕ್ಕಳೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬ್ರಿಟಿಷರಿಂದ ಸಿಕ್ಕ ಸ್ವಾತಂತ್ರ್ಯದಿಂದಾಗಿಯೇ ಮಹಿಳೆಯರು ಇಂದು ಮುಖ್ಯವಾಹಿನಿಗೆ ಬಂದು ನಮ್ಮೆಲ್ಲರ ಸರಿ ಸಮಾನಾಗಿದ್ದಾರೆಂದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣವಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳ ಸದ್ಬಳಕೆ ಆದಾಗ ಮಾತ್ರವೇ ಗಣರಾಜ್ಯೋತ್ಸವಕ್ಕೆ ನಿಜವಾದ ಅರ್ಥ ಬರಲಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ರಾಮಣ್ಣ ಮಾತನಾಡಿ, ಸ್ವಾತಂತ್ರ್ಯ ನಂತರ ಹರಿದು ಹಂಚಿ ಹೋಗಿದ್ದ ನಮ್ಮ ರಾಷ್ಟ್ರದ ಏಕೀಕರಣ ಸಂದರ್ಭ ಇದಾಗಿದೆ. ಇದರ ಹಿಂದೆ ಸಾಕಷ್ಟು ಜನರ ಪರಿಶ್ರಮವಿದ್ದು ಅಂತಹವರನ್ನು ಸ್ಮರಿಸುವ ದಿನ ಇದಾಗಿದೆ. ಗಣರಾಜ್ಯೋತ್ಸವದ ಪೂರ್ಣ ಅರ್ಥ ಪ್ರತಿಯೊಬ್ಬರೂ ಅರಿಯಿರಿ ಎಂದರು.
ಇದೇ ವೇಳೆ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ರೌಡಶಾಲೆ ಮುಖ್ಯ ಶಿಕ್ಷಕ ಟಿ.ಕುಮಾರ್, ಶಿಕ್ಷಕರಾದ ಆರ್. ಪರಶಿವಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷೆ ಎಂ.ಶ್ವೇತ, ಉಪಾಧ್ಯಕ್ಷ ಶಿವಮಾದು, ಸದಸ್ಯರಾದ ಎಂ.ಕೆ.ರೇಖಾ, ಗೀತಾ, ಸುಧಾ, ಗಣೇಶ್, ಸೋಮಶೇಖರ್, ಮಂಜುಳಾ, ನಾಗನಗೌಡ ಪಾಟೀಲ್,ನಾಗೇಶ್, ಶಿಕ್ಷಕರಾದ ನಾಗರಾಜ, ಎಂ.ಎಸ್.ಸವಿತಾ, ಎಚ್.ಸಿ. ಶೈಲಾ, ಗೋಪಾಲಕೃಷ್ಣ, ಕೆ.ಸಿ.ರತಿ, ಆರ್.ಕುಮಾರಸ್ವಾಮಿ, ಎಚ್.ವಿ.ಯಶವಂತಕುಮಾರ್, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮುಶೆಟ್ಟಿ, ಶಿಕ್ಷಕರಾದ ಶಿವಲಿಂಗಯ್ಯ, ಗೋಪಿನಾಥ್, ಉಷಾಕಿರಣ್, ನಾಗರತ್ನ, ಮಾನಸ, ಸಂದೀಪ್ ಇತರರಿದ್ದರು.