ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಬಡಾವಣೆಯಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಪರಿಶೀಲಿಸಿದರು. ಎಲ್.ನಾಗೇಂದ್ರ, ಲೋಹಿತ್ ದೊರೆಸ್ವಾಮಿ, ಪೈಟಿ ರವಿ, ಹೇಮಂತ್‌ಕುಮಾರ್‌ಗೌಡ, ಥಾಮಸ್ ಇತರರು ಇದ್ದರು. 
ಮೈಸೂರು

ಪೂರ್ವ ಬಡಾವಣೆಗಳಿಗೆ ಕಾವೇರಿ ನೀರು:ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಶೀಘ್ರದಲ್ಲೇ ತಿಪ್ಪಯ್ಯನ ಕೆರೆಯನ್ನು ನಗರ ಒನ್ ಯೋಜನೆ ಅನುಷ್ಠಾನಕ್ಕೆ ತಂದು ಅಭಿವೃದ್ಧಿ
  • ರಸ್ತೆಗಳ ಡಾಂಬರೀಕರಣಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಕಾಗಿರುವ ಅನುದಾನ ಮಂಜೂರು
ಮೈಸೂರು:ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಬಡಾವಣೆಯಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶೀಲಿಸಿದರು.
ಬಡಾವಣೆಗೆ ಕಾವೇರಿ-ಕಬಿನಿ ನೀರು ಸಿಗುತ್ತಿಲ್ಲ, ರಸ್ತೆಗಳು ಡಾಂಬರೀಕರಣವಾಗಬೇಕು, ತಿಪ್ಪಯ್ಯನಕೆರೆ ಕಲುಷಿತಗೊಂಡಿದ್ದು, ಅದನ್ನು ಶುದ್ದೀಕರಿಸಬೇಕು ಎಂದು ನಿವಾಸಿಗಳು ಮನವಿ ಸಲ್ಲಿಸಿದರು.
ಶೀಘ್ರದಲ್ಲೇ ತಿಪ್ಪಯ್ಯನ ಕೆರೆಯನ್ನು ನಗರ ಒನ್ ಯೋಜನೆ ಅನುಷ್ಠಾನಕ್ಕೆ ತಂದು ಅಭಿವೃದ್ಧಿಗೊಳಿಸಲಾಗುವುದು. ಕಾವೇರಿ ನೀರನ್ನು ಆದಷ್ಟು ಬೇಗ ಪೂರ್ವವಲಯದ ಬಡಾವಣೆಗಳಿಗೆ ತರಲಾಗುವುದು. ರಸ್ತೆಗಳ ಡಾಂಬರೀಕರಣಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಕಾಗಿರುವ ಅನುದಾನವನ್ನು ಬಡಾವಣೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಮೈಸೂರು ನಗರ ಅಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್ ದೊರೆಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಪೈಟಿ ರವಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಥಾಮಸ್, ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆರೆಹಳ್ಳಿ ಬಿ.ದೊರೆಸ್ವಾಮಿ, ಸಮಾಜ ಸೇವಕರಾದ ಶಿವಸ್ವಾಮಿ, ಶಿವಬಸಪ್ಪ, ಮಾದಪ್ಪ, ದೇವಪ್ಪಜಿ, ಶ್ರೀಕಂಠ ಮೂರ್ತಿ, ಸ್ವಾಮಿ, ಮಹೇಶ್, ಮಾದಪ್ಪ, ಪಿ.ಎಂ.ಮಹದೇವಸ್ವಾಮಿ, ಗಂಗಾಧರ, ಮುದ್ದು ಬಸವಣ್ಣ, ದೇವರಾಜಪ್ಪ ಇತರರು ಇದ್ದರು.