ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ರಸ ಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರು ಮೌನ ಪ್ರತಿಭಟನೆ ನಡೆಸಿದರು. ಎಂ.ಚಂದ್ರಶೇಖರ್, ಯೋಗೇಶ್, ಮಂಜುನಾಥ್, ಜವರೇಗೌಡ, ಎಚ್.ಡಿ.ಮಹೇಶ್, ಬಿ.ಎಂ.ಮಂಚಿಗಯ್ಯ, ನಾಗೇಶ್, ಕೃಷ್ಣೇಗೌಡ. ಸಿ.ಪಿ.ಕೃಷ್ಣ, ಆನಂದ್ ಇತರರು ಇದ್ದರು.
ತಿ.ನರಸೀಪುರ: ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟದ ಮೇಲಿನ ಅನಗತ್ಯ ಒತ್ತಡ ಹೇರದಂತೆ ಒತ್ತಾಯಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ತಾಲೂಕು ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟಗಾರರು ವ್ಯಾಪಾರ ವಹಿವಾಟು ಬಂದ್ ಮಾಡಿ, ಮೌನ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಜಮಾವಣೆಗೊಂಡಿದ್ದ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟಗಾರರು, ಅಲ್ಲಿನ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಬಳಿಕ ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ತಲುಪಿದರು. ಕಚೇರಿಯ ಮುಂಭಾಗ ಜಿಲ್ಲಾಧಿಕಾರಿಗಳಿಗೆ ಗ್ರೇಡ್ 2 ತಹಸೀಲ್ದಾರ್ ರಾಜಾಕಾಂತ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ಮಾರಾಟಗಾರರು ಸಂಘದ ತಾಲೂಕು ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಯೋಗೇಶ್, ಉಪಾಧ್ಯಕ್ಷ ಮಂಜುನಾಥ್, ಮಾರಾಟಗಾರರಾದ ಜವರೇಗೌಡ, ಎಚ್.ಪಿ.ಮಹೇಶ್, ಬಿ.ಎಂ.ಮಂಚಿಗಯ್ಯ, ನಾಗೇಶ್, ಕೃಷ್ಣೇಗೌಡ. ಸಿ.ಪಿ.ಕೃಷ್ಣ, ಆನಂದ್, ಫೈಜಾನ್, ಅಬ್ದುಲ್ ಮುಜೀಬ್, ಜವಾಬ್, ಹುಚ್ಚೇಗೌಡ. ಮಹದೇವಸ್ವಾಮಿ, ಪ್ರಸನ್ನ, ಬಿ. ಎಂ. ಸೋಮಶೇಖರ್, ಕೃಷ್ಣೇಗೌಡ, ಮಹೇಶ ಇತರರು ಇದ್ದರು.