ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು. ಎಸ್.ರಾಮಕೃಷ್ಣನ್, ಕೆ.ಆರ್.ಪ್ರಭಾಕರ್ ರಾವ್, ಎಂ.ಡಿ.ಪ್ರವೀಣ್‌ಪಾಲ್, ಸಿ.ಡಿ.ಕೃಷ್ಣ, ಜಿ.ಅಶೋಕ್, ಎಸ್.ಶಶಿರಾಜ್, ಸತ್ಯಮೂರ್ತಿ, ಶಿವಪ್ರಕಾಶ್, ವಿ.ಶ್ರೀನಾಥ್ ಇತರರು ಇದ್ದರು 
ಮೈಸೂರು

ದೇಶ ಕಟ್ಟುವಲ್ಲಿ ಬಿಲ್ಡರ್ಸ್‌ಗಳ ಪಾತ್ರ ಪ್ರಮುಖ: ಉದ್ಯಮಿ ಎಸ್.ರಾಮಕೃಷ್ಣನ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ
  • ಹೊಸದಾಗಿ ಅಧಿಕಾರವಹಿಸಿಕೊಂಡಿರುವ ತಂಡ ಒಗ್ಗಟ್ಟಿನಿಂದ ಮಾದರಿಯಾಗಿ ಕೆಲಸ ಮಾಡಬೇಕು
ಮೈಸೂರು:ದೇಶ ಕಟ್ಟುವಲ್ಲಿ ಬಿಲ್ಡರ್ಸ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ಉದ್ಯಮಿ ಎಸ್.ರಾಮಕೃಷ್ಣನ್ ಹೇಳಿದರು.
ವಿಶ್ವೇಶ್ವರನಗರದ ಕೈಗಾರಿಕಾ ವಲಯದಲ್ಲಿರುವ ಎಂಬಿಸಿಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಹೊಸದಾಗಿ ಅಧಿಕಾರವಹಿಸಿಕೊಂಡಿರುವ ತಂಡ ಒಗ್ಗಟ್ಟಿನಿಂದ ಮಾದರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷರಾಗಿ ಕೆ.ಆರ್.ಪ್ರಭಾಕರ್ ರಾವ್, ಕಾರ್ಯದರ್ಶಿಯಾಗಿ ಎಂ.ಡಿ.ಪ್ರವೀಣ್‌ಪಾಲ್, ಉಪಾಧ್ಯಕ್ಷರಾಗಿ ಸಿ.ಡಿ.ಕೃಷ್ಣ, ಜಂಟಿ ಕಾರ್ಯದರ್ಶಿಯಾಗಿ ಜಿ.ಅಶೋಕ್, ಖಜಾಂಚಿಯಾಗಿ ಎಸ್.ಶಶಿರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಸ್.ಬಾಲಾಜಿ, ಭಾರ್ಗವ್ ವಿ.ಶಿಂಧೆ, ಸಿ.ಯು.ದಿವಾಕರ್, ಟಿ.ಎಸ್. ಗುರುದತ್, ಕೆ.ಎಲ್.ನಂದಕುಮಾರ್, ವಿ.ಮೋಹನ್ ಕುಮಾರ್, ಕೆ.ಎಂ.ರಘುನಾಥ್, ಆರ್.ರಮೇಶ್‌ರಾವ್, ಕೆ.ಎನ್.ರವಿಶಂಕರ್, ಡಿ.ಶ್ರೀಹರಿ, ಸಿ.ಎಸ್.ಶ್ರೀಕಾಂತ್, ಎಸ್.ವಾಸುದೇವನ್, ಎಂ.ವಿ.ವಿನೋದ್‌ಕುಮಾರ್, ನಾಗರಾಜ್ ವಿ.ಭೈರಿ ಅಧಿಕಾರ ಸ್ವೀಕರಿಸಿದರು.
ಬಿಎಐ ರಾಷ್ಟ್ರೀಯ ಉಪಾಧ್ಯಕ್ಷ ಸತ್ಯಮೂರ್ತಿ, ಕಾರ್ಯದರ್ಶಿ ಶಿವಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ವಿ.ಶ್ರೀನಾಥ್ ಇತರರು ಇದ್ದರು.