ಮೈಸೂರು: ಮೈಸೂರಿನ ಗೌಸಿಯಾನಗರದಲ್ಲಿ ಬುಧವಾರ ಮುಂಜಾನೆ ಟೀ ಕುಡಿಯಲು ಹೋದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೌಸಿಯಾನಗರದ ನಿವಾಸಿ ಸಯ್ಯದ್ ನವಾಜ್ ಅವರ ಪುತ್ರ ಸಯ್ಯದ್ ಸೂಫಿಯಾನ್(19) ಕೊಲೆಯಾದ ಯುವಕ. ಈತ ಹ್ಯಾಂಡಿಕ್ರಾಫ್ಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಮುಂಜಾನೆ 5.40ರ ಸಮಯದಲ್ಲಿ ಮನೆಯಿಂದ ನಮಾಜ್ ಮಾಡಲು ಸಯ್ಯದ್ ಮಸೀದಿಗೆ ಹೋಗಿದ್ದು, ಬಳಿಕ ಟೀ ಕುಡಿಯಲು ತೆರಳಿದ್ದಾನೆ. ಈ ವೇಳೆ ಸಯ್ಯದ್‌ನ ಇಬ್ಬರು ಸ್ನೇಹಿತರು ಹಳೆಯ ದ್ವೇಷದಿಂದ ದಾಳಿ ನಡೆಸಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.