ಬೆಟ್ಟದತುಂಗಾ ಪ್ರಾಥಮಿಕ ಆರೋಗ್ಯ ಕೇಂದ್ರದವತಿಯಿಂದ ಸಮೀಪದ ಬಿಟಿಎಂ ಕೊಪ್ಪಲು ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಜಾಗೃತಿ ಕಾರ್ಯಕ್ರಮ ನಡೆಯಿತು.
ತಾಯಿಯ ಹಾಲು ಮಗುವಿಗೆ ಪ್ರಕೃತಿ ನೀಡಿರುವ ಅಮೂಲ್ಯ ವರವಾಗಿದ್ದು, ಜನನದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ, ಮೊದಲ ಆರು ತಿಂಗಳು ತಾಯಿಯ ಹಾಲೊಂದನ್ನೇ ನೀಡುವುದರಿಂದ ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಬೆಟ್ಟದತುಂಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಂ.ಹರ್ಷಿತಾ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಮೀಪದ ಬಿಟಿಎಂ ಕೊಪ್ಪಲು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ತನ್ಯಪಾನವು ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬ ತಾಯಿಯೂ ಇದರ ಮಹತ್ವವನ್ನು ಅರಿತು ಮಕ್ಕಳಿಗೆ ಕಡ್ಡಾಯವಾಗಿ ಸ್ತನ್ಯಪಾನ ಮಾಡಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸಿಬ್ಬಂದಿ ಮಮತಾ ಎಂ.ಕೆ., ಆಶಾ ಕಾರ್ಯಕರ್ತೆಯರಾದ ತಿಲೋತ್ತಮೆ ಹಾಗೂ ಶಾಂತಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶೀಲಾ, ರೇಣುಕಾ, ಹೇಮಾ, ಮಮತಾ ಮತ್ತು ಚಿನ್ನು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಯಶೋಧರಾ, ಸಣ್ಣಪ್ಪಾಜಿ, ಸ್ವಾಮಿಗೌಡ, ಸಿದ್ದರಾಮೇಗೌಡ ಹಾಗೂ ಗ್ರಾಮಸ್ಥರು