ರಸ್ತೆ ಅಪಘಾತ 
ಮೈಸೂರು

ಮೈಸೂರಿನಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬಾಲಕ ಸಾವು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ತಾಯಿಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ
  • ಟಿಪ್ಪರ್ ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ
  • ಬಾಲಕ ಸಾವು
ಮೈಸೂರು: ನಗರದ ಬೋಗಾದಿ ರಸ್ತೆಯಲ್ಲಿ ಶನಿವಾರ ಟಿಪ್ಪರ್ ಡಿಕ್ಕಿಯಾಗಿ ತಾಯಿಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ.
ಶಾರದಾದೇವಿನಗರದ ನಂಜುಂಡನಾಯಕ ಸುಜಾತಾ ದಂಪತಿ ಪುತ್ರ ದರ್ಶನ್ ಸಮರ್ಥ(14) ಮೃತ ಬಾಲಕ.
ಮೇದಾರಕೇರಿ ಶಾಲೆ ಶಿಕ್ಷಕಿಯಾಗಿರುವ ಸುಜಾತಾ ಅವರು ಶನಿವಾರ ಕೆಲಸ ಮುಗಿಸಿ ಮಗನೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದರು. 
ಮೈವಿವಿ ಮೌಲ್ಯಭವನದ ಎದುರಿನ ತಿರುವಿನ ಬಳಿ ವೇಗವಾಗಿ ಬಂದ ಟಿಪ್ಪರ್ ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸುಜಾತಾ ಅವರು ಸ್ಕೂಟರ್‌ನಿಂದ ಬಲಭಾಗಕ್ಕೆ ಬಿದ್ದರೆ ಬಾಲಕ ಎಡಭಾಗಕ್ಕೆ ಬಿದ್ದಿದ್ದಾನೆ.
 ಈ ಸಂದರ್ಭದಲ್ಲಿ ಆತ ಟಿಪ್ಪರ್‌ನ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಸಾರ್ವಜನಿಕರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ. ಸುಜಾತಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 
ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.