ಕೃಷ್ಣರಾಜ ಮಂಡಲದಲ್ಲಿ ಬಿಎಲ್‌ಎ-2 ಕಾರ್ಯಾಗಾರವನ್ನು ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಟಿ.ಎಸ್.ಶ್ರೀವತ್ಸ, ಸೋಮಸುಂದರ್, ಡಾ.ಇ.ಸಿ.ನಿಂಗರಾಜ್‌ಗೌಡ,, ಗೋಕುಲ್ ಗೋವರ್ಧನ್ ಇತರರು ಇದ್ದರು. 
ಮೈಸೂರು

ಕೃಷ್ಣರಾಜ ಮಂಡಲದಲ್ಲಿ ಬಿಎಲ್‌ಎ-2 ಕಾರ್ಯಾಗಾರ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ತಮ್ಮ ಜವಾಬ್ದಾರಿಯನ್ನು ಕಾರ್ಯಕರ್ತರು, ಪದಾಧಿಕಾರಿಗಳ ಜತೆಗೂಡಿ ಯಶಸ್ವಿಯಾಗಿ ಮಾಡಬೇಕು
ಮೈಸೂರು:ಕೃಷ್ಣರಾಜ ಮಂಡಲದಲ್ಲಿ ಬಿಎಲ್‌ಎ-2 ಕಾರ್ಯಾಗಾರವನ್ನು ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಬಿಎಲ್ಎ-2 ಪ್ರಮುಖ ಜವಾಬ್ದಾರಿಯಾಗಿದೆ. 260ಕ್ಕೂ ಹೆಚ್ಚು ಬಿಎಲ್‌ಎ-2 ಗಳನ್ನು ಕೃಷ್ಣರಾಜ ಮಂಡಲದಲ್ಲಿ ಮಾಡಲಾಗಿದೆ. ತಮ್ಮ ಜವಾಬ್ದಾರಿಯನ್ನು ಕಾರ್ಯಕರ್ತರು, ಪದಾಧಿಕಾರಿಗಳ ಜತೆಗೂಡಿ ಯಶಸ್ವಿಯಾಗಿ ಮಾಡಬೇಕು. ಹೀಗೆ ಮಾಡಿದಾಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ತುಂಬಾ ಸಹಾಯವಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಮಂಡಲ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ರಾಜ್ಯ ಪ್ರಕೋಷ್ಠ ಸಂಚಾಲಕ ಫಣೀಶ್, ವಿಭಾಗ ಪ್ರಭಾರಿ ಸ್ವಾಮಿ ಮರಳಾಪುರ, ಸಹ ಪ್ರಭಾರಿ ಡಾ.ಇ.ಸಿ.ನಿಂಗರಾಜ್‌ಗೌಡ, ಮಾಜಿ ಮೇಯರ್ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಬಿಎಲ್ಎ- 1ರ ಗೋಕುಲ್ ಗೋವರ್ಧನ್, ಬಿಜೆಪಿ ನಗರ ಉಪಾಧ್ಯಕ್ಷರಾದ ರಮೇಶ್, ವಿಶ್ವೇಶ್ವರಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ಜೈ ಶಂಕರ್, ನಗರ ಮಾಧ್ಯಮ ಸಹ ಸಂಚಾಲಕ ಬಿ.ಎಂ.ಸಂತೋಷ್‌ಕುಮಾರ್ ಇತರರು ಇದ್ದರು.