ಅನಿಲ್ ಕುಮಾರ್ ( 
ಮೈಸೂರು

ಕಾರು ಹರಿದು ಬೈಕ್ ಸವಾರ ಸಾವು

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಬೈಕ್ ಸವಾರನ ಮೇಲೆ ಮತ್ತೊಂದು ಕಾರು ಹರಿದು ಸವಾರ ಮೃತ
ಬೈಲುಕುಪ್ಪೆ: ಬೈಕ್‌ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಮತ್ತೊಂದು ಕಾರು ಹರಿದು ಸವಾರ ಮೃತಪಟ್ಟಿದ್ದಾನೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಶಿವಣ್ಣ ಅವರ ಮಗ ಅನಿಲ್ ಕುಮಾರ್(32) ಮೃತ ಬೈಕ್ ಸವಾರ. ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಹಳೆಯಾರು ಸಮೀಪ ಬಿ.ಎಂ.ರಸ್ತೆಯಲ್ಲಿ ಕುಶಾಲನಗರ ಕಡೆಯಿಂದ ಬರುತ್ತಿದ್ದ ಆಟೋಗೆ ಪಿರಿಯಾಪಟ್ಟಣ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಹಿಂಬದಿಯಿಂದ ಬರುತ್ತಿದ್ದ ಅನಿಲ್ ಕುಮಾರ್ ಬೈಕ್‌ಗೆ ಆಟೋ ಡಿಕ್ಕಿಯಾಗಿದೆ. ಪರಿಣಾಮ ಕೆಳಗೆ ಬಿದ್ದ ಬೈಕ್ ಸವಾರ ಚಾಲಕನ ಮೇಲೆ ಕಾರು ಹರಿದ ಪರಿಣಾಮ ಅನೀಲ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಕುಶಾಲನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತನ ಸಹೋದರ ಮಂಜು ನೀಡಿದ ದೂರಿನ ಮೇರೆಗೆ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ಬೈಲುಕುಪ್ಪೆ ಪೊಲೀಸ್ ಠಾಣೆ ಎದುರು ಭಾನುವಾರ ಅಪಘಾತ ಎಸಗಿ ಪರಾರಿ ಯಾಗಿದ್ದ ಕಾರು ಚಾಲಕನನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು. ಹೈವೇ ರಸ್ತೆಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಬೈಲುಕುಪ್ಪೆ ಪೊಲೀಸ್ ಠಾಣಾ ಪಿಎಸ್‌ಐ ರವಿಕುಮಾರ್, ಮತ್ತು ಬೆಟ್ಟದಪುರ ಪಿಎಸ್‌ಐ ಅಜಯ್ ಕುಮಾರ್ ಸ್ಥಳಕ್ಕಾಗಮಿಸಿ, ಕಾರು ಚಾಲಕನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.