ಮೈಸೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನಗರದಲ್ಲಿ ಬೈಕ್ ಹಾಗೂ ಸ್ಕೂಟರ್ ಕಳುವಾಗಿದೆ.
ಮೈಸೂರು ಅರಮನೆ ವೀಕ್ಷಿಸಲು ಕೇರಳದ ಮಲ್ಲಪ್ಪುರಂನಿಂದ ಆಗಮಿಸಿದ್ದ ಟಿ.ಪಿ. ಮೊಹಮ್ಮದ್ ಆಶಿಕ್ ಅವರ ಬೈಕ್ ಕಳವುವಾಗಿದೆ. ಇವರು ಸ್ನೇಹಿತ ಅನೀಶ್ ಅವರೊಂದಿಗೆ ಬೈಕ್‌ನಲ್ಲಿ ಏ.25 ರಂದು ನಗರಕ್ಕೆ ಆಗಮಿಸಿದ್ದರು. ಅರಮನೆ ವೀಕ್ಷಿಸಲು ಸಲುವಾಗಿ ಬೈಕ್‌ಅನ್ನು ಕಾಡಾ ಕಚೇರಿ ಫುಟ್‌ಪಾತ್ ಬಳಿ ನಿಲ್ಲಿಸಿದ್ದರು. ಅರಮನೆ ವೀಕ್ಷಿಸಿ ವಾಪಾಸ್ ಬಂದು ನೋಡಿದಾಗ ಬೈಕ್ ಕಳುವಾಗಿತ್ತು. ಈ ಕುರಿತು ಮೊಹಮ್ಮದ್ ಆಶಿಕ್ ಶುಕ್ರವಾರ ನೀಡಿದ ದೂರಿನ ಮೇರೆಗೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ-2: ಕೆ.ಆರ್. ಆಸ್ಪತ್ರೆಯ ಮೆಡಿಸನ್ ವಿಭಾಗದಲ್ಲಿ ಪಿಜಿ ವ್ಯಾಸಂಗ ಮಾಡುತ್ತಿರುವ ಬೋಗಾದಿ ವಾಗ್ದೇವಿ ನಗರ 2ನೇ ಹಂತದ ನಿವಾಸಿ ಜೆ. ನಿಶಾನ್ ಅವರ ಸ್ಕೂಟರ್ ಕಳುವಾಗಿದೆ.
ಇವರು ಏ.30 ರಂದು ಕೆ.ಆರ್. ಆಸ್ಪತ್ರೆಯ ಆವರಣದಲ್ಲಿ ಸ್ಕೂಟರ್ ನಿಲ್ಲಿಸಿದ್ದರು. ತುರ್ತು ಕೆಲಸದ ಹಿನ್ನೆಲೆಯಲ್ಲಿ ಕೀಯನ್ನು ಮರೆತು ಸ್ಕೂಟರ್‌ನಲ್ಲಿಯೇ ಬಿಟ್ಟು ಹೋಗಿದ್ದರು. ವಾಪಾಸ್ ಬಂದು ನೋಡಿದಾಗ ಸ್ಕೂಟರ್ ಕಳುವಾಗಿದೆ. ನಿಶಾನ್ ಶುಕ್ರವಾರ ನೀಡಿದ ದೂರಿನ ಮೇರೆಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.