- ಅಶೋಕಪುರಂ ಯಾರ್ಡ್‌ನಲ್ಲಿ ಆ.27ರ ಮಧ್ಯರಾತ್ರಿ ರೈಲ್ವೆ ಇಲಾಖೆಗೆ ಸೇರಿದ ಮೋಟಾರ್ ಕಳ್ಳತನ
- ಆರ್‌ಪಿಎಫ್ ಕಾನ್‌ಸ್ಟೇಬಲ್ ಮುಜಮ್ಮಿಲ್ ಖಾನ್ ಅವರನ್ನು ನೋಡಿದ ಆರೋಪಿ, ಓಡಲು ಯತ್ನಿಸಿದ್ದ
ಮೈಸೂರು:ರೈಲ್ವೆ ನಿಲ್ದಾಣಗಳಲ್ಲಿ ಮೋಟಾರ್ ಕಳವು ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಬಂಧಿಸಿದ್ದಾರೆ.
ಬಿಹಾರ ಮೂಲದ ಆಶಿಶ್ (26) ಬಂಧಿತ ಆರೋಪಿ. ಆತನ ಬಳಿಯಿಂದ ಸುಮಾರು 4 ಸಾವಿರ ರೂ. ಬೆಲೆ ಬಾಳುವ ವಿದ್ಯುತ್ ಮೋಟಾರ್ ವಶಪಡಿಸಿಕೊಳ್ಳಲಾಗಿದೆ.
ಅಶೋಕಪುರಂ ಯಾರ್ಡ್‌ನಲ್ಲಿ ಆ.27ರ ಮಧ್ಯರಾತ್ರಿ ರೈಲ್ವೆ ಇಲಾಖೆಗೆ ಸೇರಿದ ಮೋಟಾರ್ ಕಳ್ಳತನ ಮಾಡಿದ್ದನೆನ್ನಲಾಗಿದೆ. ಆರ್‌ಪಿಎಫ್ ಕಾನ್‌ಸ್ಟೇಬಲ್ ಮುಜಮ್ಮಿಲ್ ಖಾನ್ ಅವರನ್ನು ನೋಡಿದ ಆರೋಪಿ, ಓಡಲು ಯತ್ನಿಸಿದ್ದ. ಈ ಮಾಹಿತಿ ತಿಳಿದು ಆರ್‌ಪಿಎಫ್ ಕಮಾಂಡರ್ ದಿನೇಶ್ ಕುಮಾರ್ ಅವರ ಮಾಹಿತಿ ಮೇರೆಗೆ ಇತರೆ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಿಟ್ಟು ಹೋಗಿದ್ದ ಮೊಬೈಲ್ ಮಾಲೀಕರಿಗೆ ಹಸ್ತಾಂತರ: ಆ.27ರಂದು ರೈಲು ಸಂಖ್ಯೆ 16021 (ಚೆನ್ನೈ-ಮೈಸೂರು ಎಕ್ಸ್‌ಪ್ರೆಸ್) ಮೈಸೂರು ನಿಲ್ದಾಣಕ್ಕೆ ಬಂದ ನಂತರ ಪ್ರಯಾಣಿಕರೊಬ್ಬರು ಮೊಬೈಲ್ ಅನ್ನು ರೈಲಿನಲ್ಲಿ ಬಿಟ್ಟುಹೋಗಿರುವ ಬಗ್ಗೆ ಮೈಸೂರಿನ ಆರ್‌ಪಿಎಫ್‌ಗೆ ಮಾಹಿತಿ ದೊರೆಯಿತು. ಮುಖ್ಯಪೇದೆ ರುದ್ರಮೂರ್ತಿ ಅವರು, ಬೋಗಿಯನ್ನು ಪರಿಶೀಲಿಸಿ ಮೊಬೈಲ್ ಅನ್ನು ಪತ್ತೆಹಚ್ಚಿ, ಮಾಲೀಕರಾದ ಚೆನ್ನೈ ನಿವಾಸಿ ಕೆ. ಜಯಲಕ್ಷ್ಮಿ (44) ಅವರಿಗೆ ಹಸ್ತಾಂತರಿಸಲಾಯಿತು.