ಸರಗೂರು ತಹಸಿಲ್ದಾರ್ ಕಚೇರಿಯಲ್ಲಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು. ಮಲ್ಲೇಶ್, ಸೋಮಶೇಖರ, ಚಿಕ್ಕರಾಜಶಟ್ಟಿ, ಎಸ್.ರವಿ ಇತರರು ಇದ್ದರು.
ಸರಗೂರು: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲೂಕು ಆಡಳಿತದಿಂದ ಭಗೀರಥ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಿವೃತ್ತ ಪಿಡಿಒ ಹಾಗೂ ಸಮಾಜದ ಮುಖಂಡ ಮಲ್ಲೇಶ್, ಭಗೀರಥರು ಪಿತೃಗಳಿಗೆ ಮುಕ್ತಿ ನೀಡಲು ಪವಿತ್ರ ಗಂಗೆಯನ್ನು ಧರೆಗಿಳಿಸಿ, ನಮ್ಮೆಲ್ಲರನ್ನು ಪವಿತ್ರಗೊಳಿಸಿದವರು ಎಂದರು.
ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಚಿಕ್ಕರಾಜಶಟ್ಟಿ, ಸಮಾಜದ ಯಜಮಾನ ಎಸ್.ರವಿ, ಕಸಾಪ ಅಧ್ಯಕ್ಷ ಕೆಂಡಗ್ಗಣಸ್ವಾಮಿ, ಮುಖಂಡರಾದ ನಾಗರಾಜು, ಮಂಜು, ಪಶು ಸಂಗೋಪನಾ ಇಲಾಖೆ ಅಧಿಕಾರಿ ಪಾಟೀಲ್, ಕಬಿನಿ ನೀರಾವರಿ ಉಪವಿಭಾಗದ ಸಿಬ್ಬಂದಿ ಮಂಜುಳಾ, ಕಂದಾಯ ಇಲಾಖೆ ಆರ್ಐ ಮುಜೀಬ್ ಇದ್ದರು.