ಬೆಟ್ಟದಪುರದ ಯೋಜನಾ ಕಚೇರಿಯಲ್ಲಿ ನಡೆದ ಡಿಜಿಟಲ್ ಪೇ ತರಬೇತಿಯನ್ನು ಗಣ್ಯರು ಉದ್ಘಾಟಿಸಿದರು. 
ಮೈಸೂರು

ಸಮುದಾಯದ ಅಭಿವೃದ್ಧಿಗೆ ಮೌನ ಕ್ರಾಂತಿಯ ಬೆಳವಣಿಗೆ

ಬೆಟ್ಟದಪುರ: ಗ್ರಾಮಾಭಿವೃದ್ಧಿಯ ಸಿಎಸ್‌ಸಿ ಯೋಜನೆ ಸಮುದಾಯದ ಅಭಿವೃದ್ಧಿಗೆ ಮೌನ ಕ್ರಾಂತಿಯ ಬೆಳವಣಿಗೆಯಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಸಿಎಸ್‌ಸಿ ಯೋಜನೆ ಕೇಂದ್ರ ಕಚೇರಿ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಯೋಜನಾ ಕಚೇರಿಯಲ್ಲಿ ಇತ್ತಿಚೆಗೆ ಏರ್ಪಡಿಸಿದ್ದ ಬೆಟ್ಟದಪುರ, ಪಿರಿಯಾಪಟ್ಟಣ ಹಾಗೂ ಅರಕಲಗೂಡು ಯೋಜನಾ ಕಚೇರಿಗಳ ಸಿಎಸ್‌ಸಿ ಸೇವಾದಾರರು, ತಾಲೂಕು ನೊಡಲ್ ಅಧಿಕಾರಿಗಳು, ಹಣಕಾಸು ಪ್ರಬಂಧಕರು, ನಗದು ಮೇಲ್ವಿಚಾರಕರು, ಕ್ಷೇತ್ರ ಯೋಜನಾಧಿಕಾರಿಗಳ ಡಿಜಿಟಲ್ ಪೇ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು ಬ್ಯಾಂಕ್ ಸಂಬಂಧಪಟ್ಟ ಹಣಕಾಸು ವ್ಯವಹಾರಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರದ ಜತೆಗೆ ಸಂಸ್ಥೆಯಿಂದ ಸ್ಥಳೀಯವಾಗಿ ಹಳ್ಳಿಗಳಲ್ಲಿಯೇ ಸಿಎಸ್‌ಸಿ ಸೆಂಟರ್‌ಗಳನ್ನು ಆರಂಭಿಸಿ ಅವರ ಸಮಯ ಮತ್ತು ಖರ್ಚನ್ನು ಉಳಿಸಲಾಗುತ್ತಿದೆ ಎಂದರು.
ಬೆಟ್ಟದಪುರದ ವಲಯ ಯೋಜನಾಧಿಕಾರಿ ಶೇಖರ್‌ಗೌಡ ಮತ್ತು ಅರಕಲಗೂಡು ಯೋಜನಾಧಿಕಾರಿ ಬಾಬು ಅವರು ಸೇವಾದಾರರಿಗೆ ಸಿಎಸ್‌ಸಿ ಕಾರ್ಯಕ್ರಮಗಳ ಗ್ರಾಮೀಣ ಪ್ರದೇಶದ ಅನುಷ್ಠಾನ ಹಾಗೂ ಸೇವೆಗಳು ಎಲ್ಲ ಜನರಿಗೆ ತಲುಪಿಸುವ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಕಚೇರಿ ಧರ್ಮಸ್ಥಳದ ಸಿಎಸ್‌ಸಿ ವಿಭಾಗದ ಯೋಜನಾಧಿಕಾರಿ ಪ್ರದೀಪ್ ಡಿಜಿಟಲ್ ಪೇ ಬಗ್ಗೆ ತರಬೇತಿ ನೀಡಿದರು, ಸಂಸ್ಥೆಯಿಂದ ಮೈಕ್ರೋ ಎಟಿಎಂಗಳನ್ನು ಸೇವಾದಾರರಿಗೆ ವಿತರಿಸಲಾಯಿತು.
ಸಿಎಸ್‌ಸಿ ಪ್ರಬಂಧಕರು, ತಾಲೂಕು ನೋಡಲ್ ಅಧಿಕಾರಿಗಳು, ಹಣಕಾಸು ಪ್ರಬಂಧಕರು, ನಗದು ಮೇಲ್ವಿಚಾರಕರು, ಸೇವಾದಾರರು ಇದ್ದರು.